Kannada NewsKarnataka NewsNationalPolitics

*ಪತಿಯ ಅಕ್ರಮ ಸಂಬಂಧಕ್ಕೆ ಎರಡು ಜೀವ ಬಲಿ*

ಪ್ರಗತಿವಾಹಿನಿ ಸುದ್ದಿ: ಪತಿಯ ಅಕ್ರಮ ಸಂಬಂಧದ ಪರಿಣಾಮ ಎರಡು ಅಮಾಯಕ ಜೀವಗಳು ಬಲಿಯಾಗಿರುವ ಘಟನೆ ರಾಜಧಾನಿ ಬೆಂಗಳೂರಲ್ಲಿ ನಡೆದಿದೆ. ತನ್ನ ಪತಿಯ ಅಕ್ರಮ ಸಂಬಂಧದಿಂದ ನೊಂದ ಪತ್ನಿ ತನ್ನ 5 ವರ್ಷದ ಮಗಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಬಗಲಗುಂಟೆಯಲ್ಲಿ ಈ ಘಟನೆ ನಡೆದಿದೆ. ಶೃತಿ (33) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಶೃತಿ ಅವರು ಮೊದಲು ತಮ್ಮ ಮಗಳು ರೋಶಿಣಿಯನ್ನು (5) ಫ್ಯಾನ್‌ಗೆ ನೇಣು ಹಾಕಿದ್ದಾರೆ. ಆ ನಂತರ ಅದೇ ಫ್ಯಾನಿಗೆ ಅವರು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಶ್ರುತಿಯವರ ಗಂಡ ಗೋಪಾಲಕೃಷ್ಣ ಎಂಬಾತನ ಅಕ್ರಮ ಸಂಬಂಧಕ್ಕೆ ಬೇಸತ್ತು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶೃತಿ ತಮ್ಮ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button