Latest

ಶಾಲೆಗೆ ಬಣ್ಣ ಬಳಿಯಲಿದ್ದಾರೆ ಮೂರು ತಲೆಮಾರಿನ ಜನ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮಾಜಿ ವಿದ್ಯಾರ್ಥಿಗಳ ಸಂಯೋಗದೊಂದಿಗೆ ಶಾಸಕ ಅಭಯ ಪಾಟೀಲ ಆಯೋಜಿಸುತ್ತಿರುವ  ವಿಶಿಷ್ಟ ಕಲ್ಪನೆಯ ಶಾಲೆಗಾಗಿ ನಾನು  ಬಣ್ಣ ಹಚ್ಚುವ ವಿನೂತನ ಕಾರ್ಯಕ್ರಮ ಭಾನುವಾರ ಹೊಸ ಕಲ್ಪನೆಯೊಂದಕ್ಕೆ ಸಾಕ್ಷಿಯಾಗಲಿದೆ.

ವಡಗಾವಿಯ ಹಿರಿಯ ಪ್ರಾಥಮಿಕ ಶಾಲೆ ನಂ.14ರಲ್ಲಿ (ಜೈಲ್ ಶಾಲೆ) ಭಾನುವಾರ ಬೆಳಗ್ಗೆ 8.30ಕ್ಕೆ ಬಣ್ಣ ಬಳಿಯುವ ಕಾರ್ಯಕ್ರಮ ನಡೆಯಲಿದ್ದು, ಇದೇ ಶಾಲೆಯಲ್ಲಿ ಕಲಿತ ತಂದೆ,  ಮಗ,  ಮೂಮ್ಮಗ,  ಮೊಮ್ಮಗಳು ಸೇರಿ, ಮೂರು ತಲೆಮಾರುಗಳ ಜನ ಬಣ್ಣ ಬಳಿಯಲಿದ್ದಾರೆ.

  ಹಾಗೆಯೇ  ಮತ್ತೊಂದಡೆ  75 ವರ್ಷ ವಯಸ್ಸಿನ ಅಜ್ಜ, ಅಜ್ಜಿ,  ಇದೇ ಶಾಲೆಯಲ್ಲಿ ಸುಮಾರು  60 ವರ್ಷಗಳ ಹಿಂದೆ  ಕಲಿತ ಗಂಡ, ಹೆಂಡತಿ ಜೋಡಿ,  ಇಂದು ತನ್ನ ಮಕ್ಕಳ ಜೊತೆ ಸೇರಿ ಬಣ್ಣ ಹಚ್ಚಲಿದ್ದಾರೆ.

Home add -Advt

ಈ ವಿನೂತನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಳೆಯ ವಿದ್ಯಾರ್ಥಿಗಳು ಸಾಲು ಹಚ್ಚು ಬರುತ್ತಿದ್ದಾರೆ.  ಭಾನುವಾರ ಬೆಳಗ್ಗೆ ವಡಗಾವಿಯ ಜೈಲ್ ಶಾಲೆ ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.          

      

Related Articles

Back to top button