Kannada NewsKarnataka News
ಹೊತ್ತಿ ಉರಿದ ಅಂಬುಲೆನ್ಸ್

ಪ್ರಗತಿವಾಹಿನಿ ಸುದ್ದಿ, ಉಗಾರಖುರ್ದ್ -ವಾಹನಗಳು ಚಲಿಸುವಾಗ ಬೆಂಕಿ ಹೊತ್ತುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಅಥಣಿ ತಾಲೂಕಿನ ಉಗಾರಖುರ್ದ್ ನಲ್ಲಿ ಶನಿವಾರ ಮಧ್ಯಾಹ್ನ ನಿಲ್ಲಿಸಿದಲ್ಲೇ ಅಂಬುಲೆನ್ಸ್ ಒಂದು ಹೊತ್ತಿ ಉರಿದುಹೋಗಿದೆ.
ಋಗ್ಣ ಸೇವಾ ಮಂಡಳಕ್ಕೆ ಸೇರಿದ ಅಂಬುಲೆನ್ಸ್ ಇದಾಗಿದ್ದು, ಪಾರ್ಕಿಂಗ್ ಶೆಡ್ ನಲ್ಲಿ ನಿಲ್ಲಿಸಿಡಲಾಗಿತ್ತು. ಇದ್ದಕ್ಕಿದ್ದಂತೆ ಅಂಬುಲೆನ್ಸ್ ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿದೆ.




