Kannada NewsKarnataka News

ಮೈಸೂರು -ಹುಬ್ಬಳ್ಳಿ ಟ್ರೇನ್ ಬೆಳಗಾವಿವರೆಗೂ ವಿಸ್ತರಣೆ, ವಿಜಯಪುರಕ್ಕೆ ಹೊಸ ಟ್ರೇನ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಹಲವು ರೈಲುಗಳ ವಿಸ್ತರಣೆ ಹಾಗೂ ಹೆಚ್ಚುವರಿ ನಿಲುಗಡೆ ಘೋಷಿಸಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಆದೇಶಿಸಿದ್ದಾರೆ.

ಮೈಸೂರು -ಹುಬ್ಬಳ್ಳಿ ಮಧ್ಯೆ ಓಡುತ್ತಿರುವ ವಿಶ್ವಮಾನವ ಎಕ್ಸಪ್ರೆಸ್ ರೈಲನ್ನು ಬೆಳಗಾವಿವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಬೆಳಗಾವಿ ಜನರ ಬಹುಕಾಲದ ಈ ಬೇಡಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಶೀಘ್ರವೇ ಹಸಿರುನಿಶಾನೆ ತೋರಲಿದ್ದಾರೆ.

Home add -Advt

ಹರಿಹರ -ಕೊಟ್ಟೂರು ರೈಲನ್ನು ಹೊಸಪೇಟೆವರೆಗೂ ವಿಸ್ತರಿಸಲು ನಿರ್ಧರಿಸಲಾಗಿದ್ದು, ಅ.17ರಂದು ಸಚಿವರು ಹಸಿರುನಿಶಾನೆ ತೋರಲಿದ್ದಾರೆ. ಯಶವಂತಪುರ -ವಿಜಯಪುರ ರೈಲು ಆರಂಭಿಸಲು ನಿರ್ಧರಿಸಲಾಗಿದ್ದು, ಕೊಟ್ಟೂರು-ಹೊಸಪೇಟೆ ಮಾರ್ಗದಲ್ಲಿ ಓಡಲಿದೆ.

ಹುಬ್ಬಳ್ಳಿ -ಲೋಕಮಾನ್ಯ ತಿಲಕ್ ಎಕ್ಸಪ್ರೆಸ್ ರೈಲಿಗೆ ರೈಯಬಾಗದಲ್ಲಿ ನಿಲುಗಡೆ ನೀಡಿ ಆದೇಶಹೊರಡಿಸಲಾಗಿದೆ.

ಸುರೇಶ ಅಂಗಡಿಯಿಂದ ಬೆಳಗಾವಿಗೆ ಮತ್ತೊಂದು ಕೊಡುಗೆ

ಬಜೆಟ್ ಗೆ ಮುನ್ನವೇ ಬೆಳಗಾವಿಗೆ ಸುರೇಶ ಅಂಗಡಿ ಭರ್ಜರಿ ಘೋಷಣೆ

ಲಾಠಿ ಹಿಡಿದ ಕೇಂದ್ರ ಸಚಿವ ಸುರೇಶ ಅಂಗಡಿ

Related Articles

Back to top button