Kannada NewsKarnataka NewsLatest
ಕಾಲು ಜಾರಿ ನೀರಿಗೆ ಬಿದ್ದು ಇಬ್ಬರ ಸಾವು

ಪ್ರಗತಿವಾಹಿನಿ ಸುದ್ದಿ, ಕುಮಟಾ: ನಡೆದು ಸಾಗುತ್ತಿದ್ದ ಇಬ್ಬರು ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಕುಳಿಯಲ್ಲಿ ಇಂದು ಈ ದುರ್ಘಟನೆ ನಡೆದಿದೆ.
ಸತೀಶ ಪಾಂಡುರಂಗ ನಾಯ್ಕ(40) ಹಾಗೂ ಉಲ್ಲಾಸ ಗಾವಡಿ (50) ಮೃತಪಟ್ಟವರು. ಭಾರೀ ಮಳೆಗೆ ಗದ್ದೆ ಸಂಪೂರ್ಣ ಜಲಾವೃತವಾಗಿದ್ದು ಇವರಿಬ್ಬರೂ ಗದ್ದೆಯಲ್ಲಿ ಜತೆಯಾಗಿ ನಡೆದು ಸಾಗುತ್ತಿದ್ದರು. ಈ ವೇಳೆ ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಕಾಲು ಜಾರಿ ಬಿದ್ದು ಕೊಚ್ಚಿಹೋದರು.
ಮೊದಲು ಒಬ್ಬರು ಕಾಲು ಜಾರಿ ನೀರಿಗೆ ಬೀಳುತ್ತಲೇ ಅವರನ್ನು ಹಿಡಿಯಲು ಮುಂದಾದ ಇನ್ನೊಬ್ಬರೂ ನೀರಿಗೆ ಬಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




