Kannada NewsKarnataka NewsLatest

ಇಬ್ಬರು ಮಹಿಳೆಯರು ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮೂಡಲಗಿ ತಾಲೂಕಿನ ಹೊಸಟ್ಟಿ ಗ್ರಾಮದ ಬೈರನಹಟ್ಟಿ ತೋಟದ ನಿವಾಸಿ ತಂಗೆಮ್ಮಾ ಹನುಮಂತ ಸಲಬನ್ನವರ (೨೧) ಸೆ.೨೧ ರಂದು ನಾಪತ್ತೆ ಆಗಿದ್ದಾರೆ.
ಈ ಕುರಿತು ಮಲ್ಲಪ್ಪ ರಾಮಲಿಂಗಪ್ಪ ಸಲಬನ್ನವರ ಕುಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಂಗೆಮ್ಮಾ ಇವರು ಕೆಂಪು ಮೈ ಬಣ್ಣ, ದುಂಡು ಮುಖ, ೫.೨ ಅಡಿ ಎತ್ತರ ಇದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.
ಈ  ಮಹಿಳೆ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಕುಲಗೋಡ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ೦೮೩೩೪-೨೨೨೨೩೩ ಯನ್ನು ಸಂಪರ್ಕಿಸಲು ಕುಲಗೋಡ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ನಿವಾಸಿಯಾದ ದ್ಯಾಮವ್ವಾ ರಘು ಬಂಡಿವಡ್ಡರ (೨೮) ಸೆ.೧೯ ರಂದು ಬೆಳಗಾವಿಯ ಸದಾಶಿವ ನಗರದಲ್ಲಿ ಕಾಣೆಯಾಗಿದ್ದಾರೆ.
ಈ ಕುರಿತು ತಿಪ್ಪಯ್ಯಾ ಮಠಪತಿ ಅವರು ಎ.ಪಿ.ಎಮ್.ಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದ್ಯಾಮವ್ವಾ ಇವರು ಗೋದಿ ಗೆಂಪು ಮೈ ಬಣ್ಣ, ದುಂಡು ಮುಖ, ೫.೨ ಅಡಿ ಎತ್ತರ ಇದ್ದು, ಕನ್ನಡ ಹಾಗೂ ತೆಲಗು ಭಾಷೆ ಮಾತನಾಡುತ್ತಾರೆ.
ಈ  ಮಹಿಳೆ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ೯೪೮೦೮೦೪೧೦೬ ಯನ್ನು ಸಂಪರ್ಕಿಸಲು ಎ.ಪಿ.ಎಮ್.ಸಿ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button