Kannada NewsKarnataka NewsLatest

ಇಬ್ಬರು ಮಹಿಳೆಯರು ನಾಪತ್ತೆ

ಪ್ರಿಯಾಂಕಾ ಮೀಸಾಳ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಹಿಂಡಲಗಾದ ರಾಮದೇವಗಲ್ಲಿಯ ನಿವಾಸಿಯಾದ ಪ್ರಿಯಾಂಕಾ ಮೀಸಾಳ (ವ.೨೭) ಎಂಬ ಹೆಸರಿನ ಮಹಿಳೆಯು, ಬುಧವಾರ (ಆ.೧೮) ಮದ್ಯಾಹ್ನ ೧೨ ಗಂಟೆಯ ಸುಮಾರಿಗೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಮನೆಗೆ ಮರಳಿ ಬಾರದೆ ಕಾಣೆಯಾಗಿದ್ದಾರೆಂದು ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಿಯಾಂಕಾ ಮಿಸಾಳ (ವ.೨೭) ೫ ಅಡಿ ಎತ್ತರವಿದ್ದು, ದುಂಡು ಮುಖ, ಗೋದಿ ಮೈಬಣ್ಣ ಹೊಂದಿರುತ್ತಾರೆ.
ಕಾಣೆಯಾದ ಮಹಿಳೆಯು ಕೆಂಪು ಬಣ್ಣದ ಟಾಪ್, ಆರೆಂಜ್ ಬಣ್ಣದ ಬಲೂನ್ ಪ್ಯಾಂಟ್ ಧರಿಸಿದ್ದು, ಮರಾಠಿ, ಹಿಂದಿ ಭಾಷೆಯನ್ನು ಮಾತನಾಡುತ್ತಾರೆ.
ಈ ಪ್ರಕಾರ ಚಹರೆಯುಳ್ಳ ಪತ್ತೆಯಾದ ಮಹಿಳೆ ಬಗ್ಗೆ ಮಾಹಿತಿ ಸಿಕ್ಕಲ್ಲಿ, ಪೋಲಿಸ್ ಆಯುಕ್ತರು ಬೆಳಗಾವಿ ಅಥವಾ ಪೋಲಿಸ್ ಇನ್ಸ್ಪೆಕ್ಟರ್ ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆಗೆ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಪೋಲಿಸ್ ಕಂಟ್ರೋಲ್ ರೂಂ. ೦೮೩೧-೨೪೦೫೨೩೩, ಪಿ.ಐ ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆ- ೯೪೮೦೮೦೪೦೩೧, ಬೆಳಗಾವಿ ಗ್ರಾಮೀಣ ಠಾಣೆ- ೦೮೩೧-೨೪೦೫೨೫೨ ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನುಷಾ ಚಡಚಣ್ಣವರ

ಬೆಳಗಾವಿ ಖಾಸಭಾಗ ರಾಘವೇಂದ್ರ ಕಾಲೋನಿಯ ನಿವಾಸಿಯಾದ ಅನುಷಾ ಚಡಚಣ್ಣವರ (ವ.೨೩) ಎಂಬ ಹೆಸರಿನ ಮಹಿಳೆಯು, ಬುಧವಾರ (ಆ.೨೫) ಸಾಯಂಕಾಲ ೬.೩೦ ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೋದವವರು ಮನೆಗೆ ಬಾರದೆ ಕಾಣೆಯಾಗಿದ್ದಾರೆಂದು ಶಹಾಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಷಾ (ವ.೨೩) ೫ ಅಡಿ ಎತ್ತರವಿದ್ದು, ಕೋಲು ಮುಖ, ಸದೃಢ ಮೈಕಟ್ಟು ಗೋದಿ ಮೈಬಣ್ಣ ಹೊಂದಿರುತ್ತಾರೆ.
ಕಾಣೆಯಾದ ಮಹಿಳೆಯು ಕಪ್ಪು ಬಣ್ಣದ ಚೂಡಿದಾರ್, ಬಿಳಿ ಬಣ್ಣದ ಪ್ಯಾಂಟ್ ಹಾಗೂ ಕಂದು ಬಣ್ಣದ ವೇಲ್ ಧರಿಸಿದ್ದು, ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯನ್ನು ಮಾತನಾಡುತ್ತಾರೆ.
ಈ ಪ್ರಕಾರ ಚಹರೆಯುಳ್ಳ ಪತ್ತೆಯಾದ ಮಹಿಳೆ ಬಗ್ಗೆ ಮಾಹಿತಿ ಸಿಕ್ಕಲ್ಲಿ, ಪೋಲಿಸ್ ಆಯುಕ್ತರು ಬೆಳಗಾವಿ ಅಥವಾ ಪೋಲಿಸ್ ಇನ್ಸ್ಪೆಕ್ಟರ್ ಶಹಾಪೂರ ಪೋಲಿಸ್ ಠಾಣೆಗೆ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಪೋಲಿಸ್ ಕಂಟ್ರೋಲ್ ರೂಂ. ೦೮೩೧-೨೪೦೫೨೩೩, ಶಹಾಪೂರ ಪೋಲಿಸ್ ಠಾಣೆ ಬೆಳಗಾವಿ ದೂರವಾಣಿ ಸಂಖ್ಯೆ -೦೮೩೧-೨೪೦೫೨೪೪, ಪಿ.ಐ ಶಹಾಪೂರ ಪಿ.ಎಸ್ -೯೪೮೦೮೦೪೦೪೬ ಗೆ ಸಂಪರ್ಕಿಸಬಹುದು ಎಂದು ಶಹಾಪೂರ ಪೋಲಿಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಯೋಜನೆ -ಕೆ.ಎಸ್.ಈಶ್ವರಪ್ಪ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button