ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಮತ್ತೆ ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸ ಮಾಡಿದ್ದಾರೆ. ಗಡಿ ಭಾಗದಲ್ಲಿರುವ ಕನ್ನಡ ಪ್ರಾಬಲ್ಯವಿರುವ ಗ್ರಾಮಗಳಲ್ಲಿ ಮರಾಠಿ ಪ್ರಚಾರಕ್ಕೆ ಆದೇಶ ಹೊರಡಿಸಿದ್ದಾರೆ.
ಗಡಿ ಭಾಗದಲ್ಲಿನ ಆಯಾ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಶೇ.50ರಷ್ಟು ಮರಾಠಿ ಪ್ರಚಾರ ಮಾಡಬೇಕು. ಶೇ.50ಕ್ಕಿಂತ ಹೆಚ್ಚು ಮರಾಠಿಮಯ ಮಾಡಬೇಕು ಎಂದು ಪತ್ರದ ಮೂಲಕ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.
ಜತ್, ಅಕ್ಕಲಕೋಟ ಹಾಗೂ ದಕ್ಷಿಣ ಸೋಲಾಪುರ ತಾಲೂಕಿನ ಕನ್ನಡಿಗರ ಮೇಲೆ ಮರಾಠಿ ಹೇರುವಂತೆ ಠಾಕ್ರೆ ಸರ್ಕಾರ ಒತ್ತಾಯಿಸಿದ್ದು, ಈ ಮೂಲಕ ಸಂವಿಧಾನದ ಆರ್ಟಿಕಲ್ 364ಎ-ಭಾಷಾ ಅಲ್ಪಸಂಖ್ಯಾತರ ಹಕ್ಕನ್ನು ಕಸಿಯುತ್ತಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಅನ್ಯಭಾಷಿಕರ ಸಮೀಕ್ಷೆಗೆ ಆದೇಶ: ಮಹಾರಾಷ್ಟ್ರ ಕ್ರಮ ಖಂಡನೀಯ -ಡಾ.ಸೋಮಶೇಖರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ