ಪ್ರಗತಿವಾಹಿನಿ ಸುದ್ದಿ: ಮಹಿಳೆಗೆ ಲೈಂಗಿಕ ಕಿರುಕುಳ ಆರೋಪದಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.
ಕೇರಳ ಮೂಲದ ಬಿಜು ಮೋಹನ್ ಮೃತ ಆರೋಪಿ. ಬಿಜು ಮೋಹನ್ ವಿರುದ್ಧ ಮಹಿಳೆಯರಿಬ್ಬರು ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದರು, ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ ಬ್ರಹ್ಮಾವರ ಪೊಲೀಸರು ಬಿಜು ಮೋಹನ್ ನನ್ನು ವಶಕ್ಕೆ ಪಡೆದು ನಿನ್ನೆ ಬ್ರಹ್ಮಾವರ ಠಾಣೆಗೆ ಕರೆತಂದಿದ್ದರು.
ಲಾಕಪ್ ನಲ್ಲಿದ್ದ ಬಿಜು ಮೋಹನ್ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾನೆ. ಇಂದು ನಸುಕಿನ ಜಾವ 3:45ರ ಸುಮಾರಿಗೆ ಬಿಜು ಮೋಹನ್ ಗೋಡೆಗೆ ತಲೆ ಬಡಿದುಕೊಂಡಿರುವುದು ಗೊತ್ತಾಗಿದೆ. ಪೊಲೀಸರು ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯೆಯೇ ಆತ ಸಾವನ್ನಪ್ಪಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ