Karnataka NewsLatest

*ಇದ್ದಕ್ಕಿದ್ದಂತೆ ನೇಣಿಗೆ ಕೊರಳೊಡ್ಡಿದ ಅಣ್ಣ-ತಂಗಿ*

ಪ್ರಗತಿವಾಹಿನಿ ಸುದ್ದಿ: ಅಣ್ಣ ಹಾಗೂ ತಂಗಿ ಇಬ್ಬರೂ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿಯ ಲೇಬರ್ ಕಾಲೋನಿಯ ಮನೆಯಲ್ಲಿ ನಡೆದಿದೆ.

ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡು ಅಣ್ಣ-ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಲೇಶ್ (23) ಹಾಗೂ ಪವಿತ್ರಾ (17) ಮೃತರು. ಮಲ್ಲೇಶ್ ಹಾಗೂ ಪವಿತ್ರಾ ಇಬ್ಬರೂ ದೊಡ್ದಮ್ಮ-ಚಿಕ್ಕಮ್ಮನ ಮಕ್ಕಳು. ಮಲ್ಲೇಶ್ ತಾಯಿ ಹಾಗೂ ಪವಿತ್ರಾ ತಾಯಿ ಇಬ್ಬರೂ ಅಕ್ಕ-ತಂಗಿ.

ಪವಿತ್ರಾ ಮನೆ ಕೆಲಸಕ್ಕೆ ಹೋಗಿ ಪ್ರಥಮ ಪಿಯುಸಿ ಓದುತ್ತಿದ್ದಳು. ಮಲ್ಲೇಶ್ ಉಡುಪಿಯಲ್ಲಿ ಕೆಲಸ ಮಾಡುತ್ತಿದ್ದ ವಾರದ ಹಿಂದೆ ಚಿಕ್ಕಮನ ಮನೆಗೆ ಬಂದಿದ್ದ. ಪವಿತ್ರಾ ತಾಯಿ ಹನುಮವ್ವ ರಾಯಚೂರಿಗೆ ಹೋಗಿದ್ದರು. ಈ ವೇಳೆ ಮಲ್ಲೇಶ್ ಹಾಗೂ ಪವಿತ್ರಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಉಡುಪಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Home add -Advt

Related Articles

Back to top button