Karnataka NewsLatest

*ಉಡುಪಿಯಲ್ಲಿ ಮೇಘಸ್ಫೋಟ-ಹಠಾತ್ ಪ್ರವಾಹ; ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಹಿಳೆ ಸಾವು*

ಕಾರು, ಬೈಕ್ ಗಳು ನೀರುಪಾಲು

ಪ್ರಗತಿವಾಹಿನಿ ಸುದ್ದಿ: ಉಡುಪಿ ಜಿಲೆಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಏಕಾಏಕಿ ಸಂಭವಿಸಿದ ಪ್ರವಾಹದಿಂದಾಗಿ ನೀರಿನಲ್ಲಿ ಮಹಿಳೆಯೊಬ್ಬರು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

Related Articles

ಉಡುಪಿಯ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಬ್ಬಿನಾಲೆಹಳ್ಳ ಏಕಾಏಕಿ ಉಕ್ಕಿ ಹರಿದಿದೆ. ಪ್ರವಾಹದ ರಭಸಕ್ಕೆ 10ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಮುಳುಗಿವೆ. ಘಟನೆಯಲ್ಲಿ ಎರಡು ಕಾರು, ಎರಡು ಬೈಕ್ ಗಳಿ ಕೊಚ್ಚಿ ಹೋಗಿವೆ.

ಇದೇ ವೇಳೆ ಪ್ರವಾಹದ ನೀರಿನಲ್ಲಿ ಹಿರಿಯ ಮಹಿಳೆಯೊಬ್ಬರು ಕೊಚ್ಚಿ ಹೋಗಿದ್ದರು. ಇದೀಗ ಬಲ್ಲಾಡಿ ಬಳಿ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಚಂದ್ರ ಗೌಡ್ತಿ (85) ಮೃತರು.

Home add -Advt

ಉಡುಪಿ ಜಿಲ್ಲೆಯಲ್ಲಿ ನಿನ್ನೆ ಸಂಜೆ ಧಾರಾಕಾರ ಮಳೆಯಾಗಿದು, ನದಿ, ಹಳ್ಳಕೊಳ್ಳಗಳು ಪ್ರವಾಹದಂತೆ ಅಬ್ಬರಿಸಿ ಹರಿಯಲಾರಂಭಿಸಿವೆ. ಇದರಿಂದಾಗಿ ಹಲವು ಪ್ರದೇಶಗಳು, ಮನೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

Related Articles

Back to top button