Latest

ಬರೋಬ್ಬರಿ 1,80,000 ರೂಪಾಯಿಗೆ ಮಾರಾಟವಾದ ಒಂದು ಮೀನು

ಪ್ರಗತಿವಾಹಿನಿ ಸುದ್ದಿ; ಉಡುಪಿ: ಉಡುಪಿ ಮಲ್ಫೆಯಲ್ಲಿ ಸಿಕ್ಕ ಮೀನೊಂದು ಬರೋಬ್ಬರಿ 1,80,000 ರೂಪಾಯಿಗೆ ಮಾರಾಟವಾಗಿದೆ.

ಮಲ್ಪೆಯಿಂದ ಸೋಮವಾರ ಮೀನುಗಾರಿಕೆಗೆ ಹೋಗಿದ್ದಾಗ ಬಲರಾಮ್ ಎಂಬ ಹೆಸರಿನ ಬೋಟ್ ಗೆ ಈ ದುಬಾರಿ ಮೀನು ಬಿದ್ದಿದೆ. ಸಾಮಾನ್ಯವಾಗಿ ಒಂದು ಕೇಜಿ ಮೀನಿಗೆ 1,500ರಿಂದ 2000 ರೂಪಾಯಿ ಇರುತ್ತದೆ. ಆದರೆ ಈ ಮೀನು ಬರೋಬ್ಬರಿ 20 ಕೆಜಿ ತೂಕವಿದ್ದು, ಪ್ರತಿ ಕೆಜಿಗೆ 9,060 ರೂಪಾಯಿಯಂತೆ ಮಾರಾಟವಾಗಿದೆ.

ಈ ಬೃಹತ್ ಮೀನಿಗೆ ಸ್ಥಳೀಯ ಭಾಷೆಯಲ್ಲಿ ಗೋಳಿ ಮೀನು ಎಂದು ಕರೆಯುತ್ತಾರೆ. ಗೋಳಿ ಮೀನಿನ ಮತ್ತೊಂದು ಹೆಸರು ಫೋಲ್ ಫಿಶ್. ಈ ಮೀನು ದುಬಾರಿ ಮೀನಾಗಿರುವುದರಿಂದ ಸೀ ಗೋಲ್ಡ್ ಎಂದು ಕೂಡ ಕರೆಯುತ್ತಾರೆ. ಒಟ್ಟಾರೆ 20 ಕೆಜಿ ತೂಕದ ಕೇವಲ ಒಂದು ಮೀನು ಬರೋಬ್ಬರಿ 1,80,000 ರೂಪಾಯಿಗೆ ಮಾರಾಟವಾಗಿದೆ.

ಗುಟ್ಕಾ ವಿತರಕರ ಮೇಲೆ IT ದಾಳಿ; 100 ಕೋಟಿಗೂ ಅಧಿಕ ಅಕ್ರಮ ಆಸ್ತಿ ಪತ್ತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button