
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 545 ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ ಠಾಣೆ ಪೊಲಿಸರು ಹೆಡ್ ಕಾನ್ಸ್ ಟೇಬಲ್ ಓರ್ವರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಗಿರಿನಗರ ಠಾಣೆ ಹೆಡ್ ಕಾನ್ಸ್ ಟೇಬಲ್ ಮಮತೇಶ್ ಗೌಡ ಬಂಧಿತ ಆರೋಪಿ. ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಮಮತೇಶ್ ಗೌಡ ಭಾಗಿಯಾಗಿದ್ದು, ಇವರ ವಿರುದ್ಧ ಹೈಗ್ರೌಂಡ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಎರಡು ವರ್ಷದ ಹಿಂದೆ ಸಿಸಿಬಿಯಲ್ಲಿದ್ದ ಮಮತೇಶ್ ಗೌಡ ಸೀಜ್ ಮಾಡಲಾಗಿದ್ದ ರಕ್ತಚಂದನವನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಸಸ್ಪೆಂಡ್ ಆಗಿದ್ದರು. ಬಳಿಕ ಇತ್ತೀಚೆಗೆ ಗಿರಿನಗರ ಠಾಣೆ ಹೆಡ್ ಕಾನ್ಸ್ ಟೇಬಲ್ ಆಗಿ ನೇಮಕ ಗೊಂಡಿದ್ದರು ಎಂದು ತಿಳಿದುಬಂದಿದೆ. ಇದೀಗ ಪಿಎಸ್ ಐ ಹುದ್ದೆ ಅಕ್ರಮದಲ್ಲಿಯೂ ಮಮತೇಶ್ ಗೌಡ ಹೆಸರು ಕೇಳಿಬಂದಿದ್ದು, ಹೈಗ್ರೌಂಡ್ ಠಾಣೆ ಪೊಲೀಸರು ಬಂಧಿಸಿ, ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಪಿಎಸ್ ಐ ಪರೀಕ್ಷೆ ಅಕ್ರಮದ ಹಿಂದೆ ಪ್ರಭಾವಿ ಸಚಿವರ ಹೆಸರು; 80 ಲಕ್ಷಕ್ಕೆ ಡೀಲ್?