LatestNational

*ದುಬೈನಲ್ಲಿದ್ದ ಉಡುಪಿ ಮೂಲದ ಯುವಕ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಕೆಲಸದ ನಿಮಿತ್ತ ದುಬೈನಲ್ಲಿ ವಾಸವಾಗಿದ್ದ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಯುವಕನೊಬ್ಬ ಹಠಾತ್ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕುಂದಾಪುರದ ವಿಠಲವಾಡಿ ನಿವಾಸಿ 19 ವರ್ಷದ ಶಾನ್ ಡಿಸೋಜಾ ಮೃತ ಯುವಕ. ದುಬೈನಿಂದ 115 ಕಿ.ಮೀ ದೂರವಿರುವ ರಾಸ್ ಅಲ್ ಖೈಮಾದ ಸೈಂಟ್ ಮೆರೀಸ್ ಚರ್ಚ್ ಬಳಿ ಮನೆಯಲ್ಲಿ ವಾಸವಾಗಿದ್ದ ಯುವಕ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜ್ ಆಗಿ ಕೆಲಸ ಮಾಡುತ್ತಿದ್ದ. ಕೆಲಸದ ಜೊತೆಗೆ ಕಾಲೇಜು ವಿದ್ಯಾಭ್ಯಾಸವನ್ನೂ ಮಾಡುತ್ತಿದ್ದ.

ಬಿಸಿಲ ಝಳದಿಂದಾಗಿ ಮೂರ್ಛೆ ಹೋಗಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button