Film & EntertainmentLatest

*ಖ್ಯಾತ ನೃತ್ಯ ನಿರ್ದೇಶಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತೆಲುಗು, ತಮಿಳು ಚಿತ್ರರಂಗದ ಖ್ಯಾತ ನೃತ್ಯ ನಿರ್ದೇಶಕರಾಗಿರುವ ಜಾನಿ ಮಾಸ್ಟರ್ ವಿರುದ್ಧ 21 ವರ್ಷದ ಯುವತಿ ದೂರು ದಾಖಲಿಸಿದ್ದಾರೆ. ಜಾನಿ ಮಾಸ್ಟರ್ ಕೆಲ ದಿನಗಳ ಹಿಂದೆ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾಳೆ.

Home add -Advt

ಹೊರಾಂಗಣ ಚಿತ್ರೀಕರಣದ ವೇಳೆ ದೈಹಿಕ ಹಲ್ಲೆ, ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಯುವತಿ ನರಸಂಗಿ ನಿವಾಸಿಯಾಗಿರುವುದರಿಂದ ಪ್ರಕರಣವನ್ನು ನರಸಂಗಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.


Related Articles

Back to top button