ಸ್ಪೇನ್ : ರಷ್ಯಾದ ಮಾಲೀಕನಿಗೆ ಸೇರಿದ್ದ ವಾಣಿಜ್ಯ ಹಡಗೊಂದನ್ನು ಹಡಗಿನ ಉಕ್ರೇನ್ ಮೂಲದ ನಾವಿಕ ಸ್ಪೇನ್ ದೇಶದ ಬಳಿ ಸಮುದ್ರದಲ್ಲಿ ಮುಳುಗಿಸಿದ ಪ್ರಕರಣ ಬೆಳಕಿಗೆ ಬಂದಿದೆ. ರಷ್ಯಾ ಮಾಲೀಕ ಸುಮಾರು ೫೮ ಕೋಟಿ ನಷ್ಟ ಅನುಭವಿಸಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ.
ರಷ್ಯಾದ ಅಲೆಕ್ಸಾಂಡರ್ ಮಿಜಿವ್ ಎಂಬುವವರಿಗೆ ಸೇರಿದ್ದ ಸುಮಾರು ೫೮ ಕೋಟಿ ರೂ. ಮೌಲ್ಯದ ೧೫೬ ಅಡಿ ಉದ್ದದ ಲೇಡಿ ಅನಾಸ್ತಾಸಿಯಾ ಎಂಬ ಹಡಗು ಸ್ಪೇನ್ ದೇಶಕ್ಕೆ ಸರಕು ಸಾಗಣೆ ಮಾಡುತ್ತಿತ್ತು. ಈ ಹಡಗಿನ ಕ್ಯಾಪ್ಟನ್ ಉಕ್ರೇನ್ ದೇಶದವನಾಗಿದ್ದ. ಹಡಗು ಸ್ಪೇನ್‌ನ ಮಲಾರೋಕಾ ಬಂದರು ಸಮೀಪಿಸುತ್ತಿದ್ದ ವೇಳೆ ಕ್ಯಾಪ್ಟನ್‌ಗೆ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿರುವ ಮಾಹಿತಿ ಬಂದಿದೆ. ಆತ ಆಕ್ರೋಶಗೊಂಡು ಹಡಗನ್ನು ಭಾಗಶಃ ಮುಳುಗಿಸಿದ್ದಾನೆ.
ಸ್ಪೇನ್ ಪೊಲೀಸರು ಆರೋಪಿ ಕ್ಯಾಪ್ಟನ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಮಾತನಾಡಿದ ಕ್ಯಾಪ್ಟನ್, ಈ ಹಡಗು ಆಯುಧ ಸಾಗಣೆ ಮಾಡುವಂತದ್ದಾಗಿದೆ. ಇದರಲ್ಲಿ ರಷ್ಯಾ ಆಯುಧ ಸಾಗಣೆ ಮಾಡುತ್ತದೆ. ಪ್ರಸ್ತುತ ರಷ್ಯಾ ನಮ್ಮ ದೇಶದ ಮೇಲೆ ಯುದ್ಧ ಸಾರಿದ್ದು, ಇದೇ ಹಡಗಿನಲ್ಲಿ ಸಾಗಿಸಲಾದ ಆಯುಧಗಳು ನಮ್ಮ ದೇಶದ ಸೈನಿಕರನ್ನು, ನಾಗರಿಕರನ್ನು ಕೊಲ್ಲಲು ಬಳಕೆಯಾಗುತ್ತಿದೆ. ಇದರಿಂದ ಆಕ್ರೋಶಗೊಂಡು ಹಡಗು ಮುಳುಗಿಸಲು ಯತ್ನಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.
ನೆರವಿಗೆ ಮೊರೆಯಿಡುತ್ತಿರುವ ಉಕ್ರೇನ್‌ನ ಕಂದಮ್ಮಗಳ ಆಕ್ರಂದನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ