ಕುತೂಹಲ ಹುಟ್ಟಿಸಿದ ಉಕ್ರೇನಿಗರ ಕಣ್ಣುಗಳ ಚಿತ್ರ

 ಉಕ್ರೇನ್ – ಉಕ್ರೇನ್ ವಿದೇಶಾಂಗ ಸಚಿವಾಲಯವು ರಷ್ಯಾ ವಿರುದ್ಧ ಹೋರಾಡುತ್ತಿರುವ ಉಕ್ರೇನ್ ಸೈನಿಕ ಕಣ್ಣುಗಳ ಚಿತ್ರದ ಕೋಲಾಜ್ ಒಂದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದು ಕುತೂಹಲ ಹುಟ್ಟಿಸಿದೆ.

ವಿವಿಧ ವಯೋಮಾನದ ಉಕ್ರೇನ್ ಸೈನಿಕರು ಮತ್ತು ಇತರ ರೆಪ್ಜೆಗಳ ಕಣ್ಣುಗಳನ್ನಷ್ಟೇ ಫೋಟೊ ತೆಗೆದು ಕೋಲಾಜ್ ಮಾಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಉಕ್ರೇನ್ ವಿದೇಶಾಂಗ ಸಚೀವಾಲಯವು, ನಮ್ಮ ರಕ್ಷಣಾ ತಂಡದವರ ಕಣ್ಣುಗಳಲ್ಲಿ ನೋಡಿ, ಅಲ್ಲಿ ಕಿಂಚಿತ್ತೂ ಭಯದ ಛಾಯೆ ಇಲ್ಲ, ದೇವರು ಉಕ್ರೇನ್‌ನ ಎಲ್ಲ ಪ್ರಜೆಗಳಿಗೆ ಆಶೀರ್ವದಿಸಲಿ ಎಂದು ಒಕ್ಕಣಿಕೆ ಬರೆಯಲಾಗಿದೆ.

ಈ ಮೂಲಕ ಉಕ್ರೇನ್ ರಷ್ಯಾಕ್ಕೆ ಯುದ್ಧದಲ್ಲಿ ತಲೆ ಬಾಗುವುದಿಲ್ಲ ಎಂದು ಹೇಳಿದಂತಾಗಿದೆ. ಉಕ್ರೇನ್ ವಿದೇಶಾಂಗ ಸಚೀವಾಲಯದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ಕಣ್ಣುಗಳಲ್ಲಿ ದಯೆ, ಪ್ರೀತಿ ಕಾಣುತ್ತಿದೆಯೇ ಹೋರತು ಭಯದ ಲವಶೇಷವೂ ಕಂಡುಬರುತ್ತಿಲ್ಲ. ಯುದ್ಧದಲ್ಲಿ ರಷ್ಯಾ ವಿರುದ್ಧ ಉಕ್ರೇನ್ ಜಯ ಸಾಧಿಸಲಿದೆ ಎಂದು ಬರೆದಿದ್ದಾರೆ.

ಸೋನಿಯಾ, ರಾಹುಲ್, ಪ್ರಿಯಾಂಕಾ ರಾಜೀನಾಮೆ ನೀಡ್ತಾರಾ ? ದಿಢೀರ್ ದೆಹಲಿಗೆ ತೆರಳಿದ ಡಿಕೆಶಿ

Home add -Advt

Related Articles

Back to top button