Kannada NewsLatest

ಉಕ್ರೇನ್ ನಿಂದ ಬೆಳಗಾವಿಗೆ ವಾಪಸ್ ಆದ ಮೆಡಿಕಲ್ ವಿದ್ಯಾರ್ಥಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಯುದ್ಧ ಪೀಡಿತ ಉಕ್ರೇನ್ ನಿಂದ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯಾಚಾರಣೆ ಚುರುಕುಗೊಂಡಿದ್ದು, ಇದೀಗ ಬೆಳಗಾವಿ ಮೂಲದ ವೈದ್ಯಕೀಯ ವಿದ್ಯಾರ್ಥಿ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ.

ಬೈಲಹೊಂಗಲದ ಪ್ರಜ್ವಲ್ ತಿಪ್ಪಣ್ಣ ಉಕ್ರೇನ್ ನ ಟೆರ್ನೋಪಿಲ್ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದರು. ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ಧದಿಂದಾಗಿ ಕಳೆದ 8 ದಿನಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ಪ್ರಜ್ವಲ್ ಇದೀಗ ತಾಯ್ನಾಡಿಗೆ ವಾಪಸ್ ಆಗಿದ್ದು, ಬೈಲಹೊಂಗಲದ ಮನೆಗೆ ಮರಳಿದ್ದಾರೆ.

ಟೆರ್ನೋಪಿಲ್ ನಿಂದ ಮುಂಬೈ ಮಾರ್ಗವಾಗಿ ಬೆಳಗಾವಿಗೆ ಆಗಮಿಸಿದ್ದಾರೆ. ಸುರಕ್ಷಿತವಾಗಿ ಮಗ ವಾಪಸ್ ಆಗಿರುವುದಕ್ಕೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಉಕ್ರೇನ್ ನಲ್ಲಿ ಸಿಲುಕಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮೂಲದ ವಿದ್ಯಾರ್ಥಿನಿ ಸ್ನೇಹಾ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಆಗಿದ್ದು, ಸಂಜೆ ವೇಳೆಗೆ ಬೆಂಗಳೂರು ತಲುಪುವುದಾಗಿ ತಿಳಿಸಿದ್ದಾರೆ. ಉಕ್ರೇನ್ ನಲ್ಲಿ 4ನೇ ವರ್ಷದ ಎಂಬಿಬಿಎಸ್ ಓದುತ್ತಿದ್ದ ಸ್ನೇಹಾ, ದೆಹಲಿಗೆ ಬಂದು ತಲುಪಿದ್ದು, ಸಂಜೆ ವೇಳೆಗೆ ವಿಮಾನ ಬೆಂಗಳೂರು ತಲುಪಲಿದೆ. ಇನ್ನೂ ಹಲವು ರಾಜ್ಯದ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಂಕಷ್ಟಕ್ಕೀಡಾಗಿದ್ದು, ಎಲ್ಲರನ್ನು ಸರ್ಕಾರ ಶೀಘ್ರವಾಗಿ ವಾಪಸ್ ಕರೆದುಕೊಂಡು ಬರಲಿ. ಸುರಕ್ಷಿತವಾಗಿ ಮನೆ ಸೇರುವಂತಾಗಲಿ ಎಂದು ಹೇಳಿದ್ದಾರೆ.

Home add -Advt

ಮಸೀದಿಯಲ್ಲಿ ಬಾಂಬ್ ಸ್ಫೋಟ; 40ಕ್ಕೂ ಹೆಚ್ಚು ಜನ ಸಾವು

Related Articles

Back to top button