Latest

ರಷ್ಯಾ ಯುದ್ಧಕ್ಕೆ ಪ್ರಧಾನಿ ತಟಸ್ಥ ನಿಲುವು; ಕಾರಣವೇನು?

ಪ್ರಗತಿವಾಹಿನಿ ಸುದ್ದಿ; ಮೈಸೂರು: ಉಕ್ರೇನ್ ವಿರುದ್ಧ ರಷ್ಯಾ ನಡೆಸಿರುವ ಭೀಕರ ಯುದ್ಧ 8ನೇ ದಿನಕ್ಕೆ ಕಾಲಿಟ್ಟಿದ್ದು, ವಿಶ್ವದ ಹಲವು ದೇಶಗಳು ರಷ್ಯಾ ನಡೆಯನ್ನು ಖಂಡಿಸಿವೆ.

ಉಭಯ ದೇಶಗಳು ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದಿರುವ ಪ್ರಧಾನಿ ನರೇಂದ್ರ ಮೋದಿ ತಟಸ್ಥ ನಿಲುವು ಹೊಂದಿದ್ದಾರೆ. ಮುಂದಾಲೋಚನೆಯಿಂದಲೇ ಪ್ರಧಾನಿ ಈ ನಿಲುವು ತಳೆದಿದ್ದಾಗಿ ಸಂಸದ ಪ್ರತಾಪ್ ಸಿಂಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯವನ್ನು ಕೇಂದ್ರ ಸರ್ಕಾರ ಚುರುಕುಗೊಳಿಸದೇ ವಿಳಂಬ ಮಾಡುತ್ತಿದೆ. ರಷ್ಯಾ ದಾಳಿಗೆ ಭಾರತೀಯ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ವಾಗ್ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ನಿಂದ ನಾವು ವಿದೇಶಾಂಗ ನೀತಿಯ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದಿದ್ದಾರೆ.

ರಷ್ಯಾ ಮೇಲೆ ಭಾರತ ತೀವ್ರ ಅವಲಂಬಿತವಾಗಿದೆ. ರಷ್ಯಾ ತನ್ನ ಭದ್ರತೆಗಾಗಿ, ಸುರಕ್ಷತೆಗಾಗಿ ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ. ರಷ್ಯಾದ ವಿರುದ್ಧ ನಾವು ಹೋಗುವುದು ಕಷ್ಟ. ರಷ್ಯಾ ಮೇಲೆ ಭಾರತ ಅವಲಂಭಿಸುವಂತೆ ಸೃಷ್ಟಿಸಿದ್ದೇ ಕಾಂಗ್ರೆಸ್. ನಾವು ರಷ್ಯಾ ಎದುರು ಹಾಕಿಕೊಂಡರೆ ನಮಗೆ ರಷ್ಯಾ ನೆರವು ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಯುದ್ಧದಂತಹ ಸಂದರ್ಭ ಎದುರಾದರೆ ರಷ್ಯಾ ಭಾರತದ ನೆರವಿಗೆ ಬರುತ್ತಾ? ಭಾರತ ರಷ್ಯಾ ವಿರುದ್ಧ ಹೋಗಲು ಸಾಧ್ಯವಾಗದು. ದೂರಾಲೋಚನೆಯಿಮ್ದಲೇ ಪ್ರಧಾನಿ ಮೋದಿ ತಟಸ್ಥ ನಿಲುವು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button