ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಚಿವ ಉಮೇಶ ಕತ್ತಿ ನಿಧನದ ಹಿನ್ನೆಲೆಯಲ್ಲಿ ಬುಧವಾರ ಬೆಳಗಾವಿ ಜಿಲ್ಲೆಯ ಎಲ್ಲ ಶಾಲೆ ಕಾಲೇಜು, ಸರಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯ ತಿಳಿಸಿದ್ದಾರೆ.
ನಮ್ಮ ಮತ್ತು ಉಮೇಶ ಕತ್ತಿ ಕುಟುಂಬದ ಸಂಬಂಧ 4 ದಶಕಗಳದ್ದಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣ್ಣೀರು ಹಾಕಿದರು.
ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರದ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಅವರ ತಂದೆ ಅಧಿವೇಶ ನಡೆಯುವ ವೇಳೆಯೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಶಾಸಕರಾಗಿ ಉಮೇಶ ಕತ್ತಿ ಆಯ್ಕೆಯಾಗಿದ್ದರು. ಅವರ ತಂದೆ ನಮ್ಮ ತಂದೆಯವರ ಜೊತೆ ಒಡನಾಟ ಹೊಂದಿದ್ದರು ಎಂದರು.
ಯಾವುದೇ ಖಾತೆಯನ್ನು ನಿಭಾಯಿಸುವಲ್ಲಿ ಅವರು ತಮ್ಮ ಯಶಸ್ವಿಯಾಗಿದ್ದರು. ಉತ್ತರ ಕರ್ನಾಟಕದ ರೈತರ ಬೆಳೆಯನ್ನು ಪಡಿತರಕ್ಕೆ ತಂದರು. ನೀರಾವರಿ ವಿಷ್ಯದಲ್ಲೀ ಅವರು ತಜ್ಞರಾಗಿದ್ದರು. ಹಿಡಕಲ್ ಡ್ಯಾಂ ನ್ನು ಆಲಮಟ್ಟಿ ಮತ್ತು ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕನಸಿತ್ತು. ಬಜೆಟ್ ನಲ್ಲಿ ನಾನು ಘೋಷಿಸಿದಾಗ ಬಹಳ ಸಂತೋಷ ವ್ಯಕ್ತಪಡಿಸಿದ್ದರು.
ಎಲ್ಲ ಮುಖಂಡರೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದ್ದರು. ನನ್ನೊಂದಿಗೆ 3 ದಶಕಗಳಿಂದ ಸಹೋದರ ಸಂಬಂಧ ಹೊಂದಿದ್ದರು. ಹಲವಾರು ಸಂದರ್ಭದಲ್ಲಿ ಅನೇಕ ನಿರ್ಣಯಗಳನ್ನು ಒಟ್ಟಿಗೆ ತೆಗೆದುಕೊಂಡಿದ್ದೆವು ಎನ್ನುತ್ತ ಗಳಗಳನೆ ಅತ್ತು ಬಿಟ್ಟರು.
ಕ್ರಿಯಾಶೀಲ, ಧೀಮಂತ ನಾಯಕ, ಸಹಕಾರಿ ಧುರೀಣರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.
ಸಹಕಾರಿ ರಂಗದಲ್ಲಿ ವಿದ್ಯುತ್ ಉತ್ಪಾದಿಸಿ ಹಂಚುವ ಸಂಘ ಕಟ್ಟಿ ಬೆಳೆಸಿದ್ದರು. ನೀರಾವರಿ ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಅಜಾತ ಶತ್ರುವಾಗಿದ್ದರು ಎಂದು ಸ್ಮರಿಸಿದರು.
ಉತ್ತರ ಕರ್ನಾಟಕದ ಧ್ವನಿ ನಿಂತು ಹೋಗಿದೆ. ಬೆಳಗಾವಿ ಜಿಲ್ಲೆ ಅನಾಥವಾಗಿದೆ. ವಯಕ್ತಿಕವಾಗಿ ನನಗೆ ತುಂಬಲಾರದ ಹಾನಿಯಾಗಿದೆ ಎಂದು ಹೇಳಿದರು.
ಬುಧವಾರ ಬೆಳಗ್ಗೆ 7 ಗಂಟೆಗೆ ಬೆಂಗಳೂರಿನಿಂದ ಏರ್ ಅಂಬುಲೆನ್ಸ್ ಮುಖಾಂತರ ಬೆಳಗಾವಿಗೆ ಪಾರ್ಥಿವ ಶರಿೀರ ಒಯ್ದು, ಸಂಕೇಶ್ವರದ ಅವರ ಸಕ್ಕರೆ ಕಾರ್ಖಾನೆ ಬಳಿ ಅಂತಿಮ ದರ್ಶನಕ್ಕಿಟ್ಟು, ನಂತರ ಬೆಲ್ಲದ ಬಾಗೇವಾಡಿಗೆ ಒಯ್ಯಲಾಗುವುದು. ಸಂಜೆ 5 ಗಂಟೆಗೆ ಅವರ ಸ್ವಂತ ತೋಟದಲ್ಲಿ ಅಂತಿಮ ಕ್ರಿಯೆ ನಡೆಸಲಾಗುವುದು ಎಂದು ಸಿಎಂ ಹೇಳಿದರು.
ಬೆಳಗ್ಗೆ ಬೆಂಗಳೂರಿನಿಂದ 2 ವಿಶೇಷ ವಿಮಾನಗಳು ಬರಲಿದ್ದು, ಒಂದರಲ್ಲಿ ಮೃತದೇಹ ಮತ್ತು ಕುಟುಂಬದವರು, ಇನ್ನೊಂದರಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಆಗಮಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 10 ಗಂಟೆಗೆ ಬೆಂಗಳಊರಿನಿಂದ ಬೆಳಗಾವಿ ಆಗಮಿಸಲಿದ್ದಾರೆ.
https://pragati.taskdun.com/latest/minister-umesh-katthi-passed-away/
https://pragati.taskdun.com/belgaum-news/minister-umesh-katthi-passed-away/
ಉಮೇಶ ಕತ್ತಿ ನಿಧನ: CM ಬೊಮ್ಮಾಯಿ ತೀವ್ರ ಸಂತಾಪ; ಬುಧವಾರ ಬೆಳಗಾವಿಗೆ ಮೃತದೇಹ; ತಂದೆಯಂತೆ ಶಾಸಕರಾಗಿದ್ದಾಗಲೇ ಸಾವು
https://pragati.taskdun.com/latest/umesh-katthi-dies-cm-bommai-deep-condolences-dead-body-to-sankeshwar-on-wednesday/
https://pragati.taskdun.com/karnataka-news/2-state-in-karnataka-after-2024-50-new-state-in-the-country-umesh-katti/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ