ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತೀಚೆಗೆ ಅಗಲಿದ ಆಹಾರ ಮತ್ತು ನಾಗರೀಕ ಪೂರೈಕೆ ಮತ್ತು ಅರಣ್ಯ ಸಚಿವ ದಿವಂಗತ ಉಮೇಶ ಕತ್ತಿ ಅವರ ಹುಕ್ಕೇರಿ ನಿವಾಸಕ್ಕೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕರ್ಯಕಾರಿ ಸಮಿತಿ ಮತ್ತು ಎಲ್ಲಾ ತಾಲೂಕಾ ಅಧ್ಯಕ್ಷರುಗಳು ಭೇಟಿ ನೀಡಿ ಅಗಲಿದ ಉಮೇಶ ಕತ್ತಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೇ ಅವರ ನಿಧನಕ್ಕೆ ಅಪಾರ ಶೋಕ ವ್ಯಕ್ತ ಪಡಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಉಮೇಶ ಕತ್ತಿ ರವರು ಅಪಾರ ಕನ್ನಡ ಪ್ರೇಮಿಯಾಗಿದ್ದು ಕನ್ನಡದ ಕೆಲಸಗಳಿಗೆ ಬೆನ್ನೆಲಬಾಗಿ ನಿಂತು ಕನ್ನಡ-ಕನ್ನಡಿಗರ ಶ್ರೋಯೋಭಿವೃದ್ದಿಗಾಗಿ ದ್ವನಿ ಎತ್ತುವರಲ್ಲಿ ಮೊದಲಿಗರಾಗಿದ್ದರು ಅಲ್ಲದೇ ಕನ್ನಡ ಸಾಹಿತ್ಯ ಪರಿಷತ್ ನೊಂದಿಗೆ ಅವಿನಾಭಾವ ಸಂಬAದ ಹೊಂದಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ ಕರ್ಯಗಳಿಗೆ ಬಹಳಷ್ಟು ಬೆಂಬಲ ನೀಡುತ್ತಿದ್ದರು ಎಂದರಲ್ಲದೇ ಅವರ ಅಗಲಿಕೆಯಿಂದಾಗಿ ಕನ್ನಡ ನಾಡಿಗೆ ಅಪಾರ ನಷ್ಟವುಂಟಾಗಿದೆ ಎಂದು ಶೋಕ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ವಿವಿಧ ತಾಲೂಕಿನ ಅಧ್ಯಕ್ಷರುಗಳಾದ ಪ್ರಕಾಶ ಅವಲಕ್ಕಿ, ಡಾ. ಸುರೇಶ ಉಕ್ಕಲಿ, ಶ್ರೀಮತಿ ಭಾರತಿ ಮಗದುಮ್, ಈರಣ್ಣ ಶಿರಗಾವಿ, ಎಂ. ಈ. ಕನಶೆಟ್ಟಿ, ಡಾ. ಸಂಜಯ ಶಿಂದಿಹಟ್ಟಿ, ಪಾಂಡುರAಗ ಜಟಗನ್ನವರ, ಜಿಲ್ಲಾ ಗೌರವ ಕರ್ಯದರ್ಶಿ ಎಂ. ವೈ. ಮೆಣಶಿನಕಾಯಿ, ಕಿರಣ ಸಾವಂತನವರ, ಶಿವಾನಂದ ತಲ್ಲೂರ, ಆಕಾಶ್ ಥಬಾಜ, ವಿರಭದ್ರ ಅಂಗಡಿ, ಎ. ಹೆಚ್. ಅಂಟಗುಡಿ, ಬಿ. ವೈ ಶಿವಾಪೂರ ಒಳಗೊಂಡAತೆ ಇನ್ನೀತರ ಕರ್ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ED ವಿಚಾರಣೆ ವೇಳೆ ವೈದ್ಯರ ನೆರವು ಕೋರಿದ ಡಿ.ಕೆ.ಶಿವಕುಮಾರ್
https://pragati.taskdun.com/politics/d-k-shivakumaredenquiry/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ