Kannada NewsKarnataka NewsLatest

ಗಾಳಿ, ಮಳೆ: ತಾತ್ಕಾಲಿಕ ತರಕಾರಿ ಮಾರುಕಟ್ಟೆ ಹರೋಹರ

https://youtu.be/15AGsH7C4Fs

 

Home add -Advt

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ, ಮಳೆಯಾಗುತ್ತಿದೆ.  ಸುಮಾರು ಅರ್ಧ ಗಂಟೆಯಿಂದಲೂ ಮಳೆ ಸುರಿಯುತ್ತಿದ್ದು, ಜೋರಾಗಿ ಗಾಳಿ ಬೀಸುತ್ತ ಆತಂಕ ಸೃಷ್ಟಿಸುತ್ತಿದೆ.

ಗಾಳಿ, ಮಳೆಯಿಂದಾಗಿ, ನಗರದ ಮಾಲಿನಿ ಸಿಟಿಯಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ತರಕಾರಿ ಮಾರುಕಟ್ಟೆ ಸಂಪೂರ್ಣ ನಾಶವಾಗಿದೆ. ಹಳೆ ಪಿಬಿ ರಸ್ತೆಯ ಮಾಲಿನಿ ಸಿಟಿಯಲ್ಲಿ ಕೊರೋನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೋಲ್ ಸೇಲ್ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿತ್ತು. ಆದರೆ  ಗಾಳಿಯಿಂದಾಗಿ ತಗಡುಗಳು ಸಂಪೂರ್ಣ ಹಾರಿ ಹೋಗಿದ್ದು, ಮಾರುಕಟ್ಟೆ ನಿರ್ನಾಮವಾಗಿದೆ.  ಭಾರಿ ಪ್ರಮಾಣದಲ್ಲಿ ತರಕಾರಿಗಳು ಸಹ ಹಾಳಾಗಿವೆ.

ಗಾಳಿ, ಮಳೆ ಇನ್ನೂ ಸಹ ಮುಂದುವರಿದಿದೆ.

Related Articles

Back to top button