ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ (61) ಹೃದಯಾಘಾತದಿಂದ ವಿಧಿವಶರಾಗಿದ್ದು, ಬೆಂಗಳೂರಿನಿಂದ ಬೆಳಗಾವಿಗೆ ಅವರ ಪಾರ್ಥಿವ ಶರೀರ ಏರ್ ಲಿಫ್ಟ್ ಗೆ ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ.
ಉಮೇಶ್ ಕತ್ತಿ ಅವರ ಪಾರ್ಥಿವ ಶರೀರ ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿದ್ದು, ಹೈದರಾಬಾದ್ ನಿಂದ ವಿಶೇಷ ಏರ್ ಆಂಬುಲೆನ್ಸ್ ಆಗಮಿಸಲಿದ್ದು, ಏರ್ ಆಂಬುಲೆನ್ಸ್ ಮೂಲಕ ಬೆಳಗಾವಿಗೆ ಪಾರ್ಥಿವ ಶರೀರ ಸ್ಥಳಾಂತರಿಸಲಾಗುತ್ತಿದೆ.
ಆದರೆ ಬೆಳಿಗ್ಗೆ 10:10ಕ್ಕೆ ಆಗಮಿಸಬೇಕಿದ್ದ ಏರ್ ಆಂಬುಲೆನ್ಸ್ ಬರುವುದು ತಡವಾಗಿದ್ದು, 20 ನಿಮಿಷ ವಿಳಂಬವಾಗಿದೆ. ಅಲ್ಲದೇ ಏರ್ ಆಂಬುಲೆನ್ಸ್ ನಲ್ಲಿ ಪಾರ್ಥಿವ ಶರೀರ ಇಡಲು 20 ನಿಮಿಷಗಳ ಅಗತ್ಯವಿರುವುದರಿಂದ ಬೆಳಗಾವಿಗೆ ಸಚಿವರ ಪಾರ್ಥಿವ ಶರೀರ ಸ್ಥಳಾಂತರ ಸ್ವಲ್ಪ ವಿಳಂಬವಾಗುತ್ತಿದೆ.
ಚುನಾವಣೆಗೆ ನಿಲ್ಲಲೆಂದು ಅಂದು ಹೊಸ ಪ್ಯಾಂಟ್ ಹೊಲಿಸಿದ್ದ ಉಮೇಶ ಕತ್ತಿ! ; ನನಸಾಗಲೇ ಇಲ್ಲ 2 ರಾಜ್ಯದ ಕನಸು
https://pragati.taskdun.com/latest/umesh-katthi-weared-pants-for-the-first-time-to-stand-for-election-never-realized-the-dream-of-2-states/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ