ಹತ್ತು ನಿಮಿಷ ಮೊದಲು ಆಸ್ಪತ್ರೆಗೆ ಬಂದಿದ್ದರೆ ಸಚಿವ ಉಮೇಶ್ ಕತ್ತಿ ಜೀವ ಉಳಿಸಬಹುದಿತ್ತು; ಘಟನೆ ವಿವರಿಸಿದ ಡಾ.ಗುರುದೇವ್
ಪ್ರಗತಿವಾಹಿನಿ ಸುದ್ದಿ;ಬೆಂಗಳೂರು: ಆಹಾರ ಸಚಿವ ಉಮೇಶ್ ಕತ್ತಿ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದು, ಕೊನೇ ಕ್ಷಣದಲ್ಲಿ ಸಚಿವರ ಪ್ರಾಣ ಉಳಿಸಲು ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯರ ತಂಡ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದರೆ ಆಸ್ಪತ್ರೆಗೆ ಬರುವ ಮೊದಲೇ ಸಚಿವರ ಉಸಿರು ನಿಂತು ಹೋಗಿತ್ತು. ಈ ಬಗ್ಗೆ ಎಂ.ಎಸ್.ರಾಮಯ್ಯ ಆಸ್ಪತ್ರೆ ನಿರ್ದೇಶಕ ಡಾ.ಗುರುದೇವ್ ತಿಳಿಸಿದ್ದಾರೆ.
ಡಾಲರ್ಸ್ ಕಾಲನಿಯ ಸಚಿವರ ನಿವಾಸದಲ್ಲಿ ಉಮೇಶ್ ಕತ್ತಿ ಅವರು ಬಾತ್ ರೂಮಿಗೆ ಹೋಗಿದ್ದ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಮನೆ ಕೆಲಸದವರಿಗೆ ಗಮನಕ್ಕೆ ಬಂದು ತಕ್ಷಣ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಸಚಿವರನ್ನು ಕರೆದುಕೊಂಡು ಬರುವಾಗಲೇ 15 ನಿಮಿಷ ತಡವಾಗಿ ಬಿಟ್ಟಿತ್ತು. ಒಂದು ವೇಳೆ ಮನೆಯಲ್ಲಿಯೇ ಸಚಿವರಿಗೆ ಸಿಪಿಆರ್ ಮಾಡಿದ್ದರೂ ಅವರ ಜೀವ ಉಳಿಯುತ್ತಿತ್ತು ಎಂದು ಡಾ.ಗುರುದೇವ್ ತಿಳಿಸಿದ್ದಾರೆ.
ಆಸ್ಪತ್ರೆಗೆ ಕರೆತಂದ ಬಳಿಕ ತಕ್ಷಣ ತುರ್ತು ತಪಾಸಣೆ ಮಾಡಲಾಯಿತು. ಆಗಲೇ ಅವರ ಹೃದಯ ಕೆಲಸಮಾಡುತ್ತಿರಲಿಲ್ಲ. ಆದರೂ ಸಚಿವರ ಜೀವ ರಕ್ಷಣೆಗಾಗಿ 7 ಬಾರಿ ಸಿಪಿಆರ್ ಮಾಡಿದ್ದೇವೆ. ಆದರೆ ಹಾರ್ಟ್ ಕೆಲಸ ಮಾಡಿಲ್ಲ. ಹಾಗಾಗಿ ರಾತ್ರಿ 11:30ರ ಸುಮಾರಿಗೆ ಸಚಿವರು ನಿಧರಾಗಿದ್ದಾರೆ ಎಂದು ನಾವು ಘೀಷಿಸಿದೆವು. ಮನೆಯಲ್ಲಿಯೇ ಸಿಪಿಆರ್ ಮಾಡಿ 10 ನಿಮಿಷದೊಳಗೆ ಆಸ್ಪತ್ರೆಗೆ ಬಂದಿದ್ದರೆ ಸಚಿವರನ್ನು ಉಳಿಸಬಹುದಿತ್ತು.
ಸಚಿವರಿಗೆ ಮೊದಲೇ ಹೃಯ ಸಮಸ್ಯೆ ಇತ್ತು. ಬೈಪಾಸ್ ಸರ್ಜರಿ ಮಾಡಬೇಕು ಎಂದು ಹೇಳಲಾಗಿತ್ತು. ಎರಡು ಬಾರಿ ಸ್ಟೆಂಟ್ ಹಾಕಲಾಗಿತ್ತು. ಹಾಗಾಗಿ ಅವರಿಗೆ ಹೃದಯಾಘಾತವಾಗಿರುವ ಸಾಧ್ಯತೆ ಇತ್ತು. ಅಲ್ಲಿಂದ ಆಸ್ಪತ್ರೆಗೆ ಬರುವಷ್ಟರಲ್ಲಿ ಸಾಕಷ್ಟು ಸಮಯವಾಗಿದೆ. ಮನೆಯಲ್ಲೇ ಸಿಪಿಆರ್ ಮಾಡಿದ್ದರೆ, ಹತ್ತು ನಿಮಿಷ ಮೊದಲು ಆಸ್ಪತ್ರೆಗೆ ಬಂದಿದ್ದರೆ ಏನಾದರೂ ಮಾಡಿ ಸಚಿವರ ಜೀವ ಉಳಿಸಬಹುದಿತ್ತು ಎಂದು ವಿವರಿಸಿದ್ದಾರೆ.
ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ರಾ ಉಮೇಶ್ ಕತ್ತಿ?; ಸಿದ್ದರಾಮಯ್ಯ ಹೇಳಿದ್ದೇನು?
https://pragati.taskdun.com/latest/siddaramaiahcancelledkanyakumari-tripumesh-katti-death/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ