
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರ ಎಷ್ಟೆ ನಿರ್ಬಂಧ ಹೆರಿದರು ಮೈಕ್ರೋ ಫೈನಾನ್ಸ್ ಕಿರುಕುಳ ನಿಲ್ಲುತ್ತಿಲ್ಲ. ಫೈನಾನ್ಸ್ ಕಿರುಕುಳಕ್ಕೆ ಬೆಳಗಾವಿಯಲ್ಲಿ ಮಹಿಳೆ ಓರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಆನಿಗೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಗೌರವ್ವ ನೀಲ್ಲಪ್ಪ ಕೆಂಗಾನೂರ (36) ಎಂದು ಗುರುತಿಸಲಾಗಿದೆ.
ಮೃತ ನೀಲಪ್ಪ ಮೈಕ್ರೋ ಫೈನಾನ್ಸ್ ನಲ್ಲಿ 7-10 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿಗಳು ಸಾಲ ವಸೂಲಾತಿಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದ ಮಹಿಳೆ ಮನೆ ಗೋಡೆ ಮೇಲೆ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾಳೆ.
ಗೋಡೆ ಮೇಲೆ ಡೆತ್ ನೋಟ್ ಬರೆದಿಟ್ಟಿದ್ದು, ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ. ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಕಾರಣರಾದವರ ಹೆಸರುಗಳನ್ನು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಡೆತ್ ನೋಟ್‌ನಲ್ಲಿ ನನ್ನ ಸಾವಿಗೆ ಕಾರಣ ಸಂಘದ ಸುಮವ್ವ ಮಂಜವ್ವ ಮತ್ತು ಕಸ್ತೂರಿ. ಮಕ್ಕಳು ನಿಮ್ಮ ಜವಾಬ್ದಾರಿ. ಸಿದ್ದಪ್ಪ ಆರೂಡನನ್ನು 10ನೇ ತರಗತಿ ಪಾಸ್ ಮಾಡಿಸಬೇಕು. ಇದು ನನ್ನ ಕೊನೆಯ ಆಸೆ. ತಂಗಿಯನ್ನು ಚೆನ್ನಾಗಿ ನೋಡಿಕೋ ಎಂದು ಗೌರವ್ವ ಮನೆಯ ಗೋಡೆಯ ಮೇಲೆ ಬರೆದಿದ್ದಾರೆ.



