CrimeKannada NewsKarnataka NewsNational

*ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ*

ಪ್ರಗತಿವಾಹಿನಿ ಸುದ್ದಿ: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಂದು ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಆನೇಕಲ್ ಹೀಲಲಿಗೆಯಲ್ಲಿ ಈ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಒಡಿಶಾ ಮೂಲದ ಮಂಜುಳಾಳನ್ನು ಕೊಂದು ದೀಪಂತ್ ತಾನೂ ಪ್ರಾಣ ಬಿಟ್ಟಿದ್ದಾನೆ. 

ಕಳೆದ ಬುಧವಾರ ಮಂಜುಳಾ ಹಾಗೂ ದೀಪಂತ್ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ಹೋಗಿ ಮಂಜುಳಾ ಮೇಲೆ ದೀಪಂತ್ ಹಲ್ಲೆ ನಡೆಸಿದ್ದ ಈ ವೇಳೆ ಮಂಜುಳಾ ಪ್ರಾಣ ಬಿಟ್ಟಿದ್ದಾಳೆ. ಬಳಿಕ ಶವದ ಮುಂದೆ ಕಣ್ಣೀರು ಹಾಕಿ ವಿಡಿಯೋ ಮಾಡಿದ್ದ ದೀಪಂತ್, ಮಂಜುಳಾ ಹಣೆಗೆ ಸಿಂಧೂರವಿಟ್ಟಿದ್ದ ಬಳಿಕ ಒಡಿಶಾ ಭಾಷೆಯಲ್ಲಿ ಡೆತ್‌ನೋಟ್ ಬರೆದು ತಾನು ಕೂಡ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅನುಮಾನಗೊಂಡ ಮನೆ ಮಾಲೀಕ ಕಿಟಕಿಯಲ್ಲಿ ನೋಡಿದಾಗ ಮಂಜುಳಾ ಮತ್ತು ದೀಪಂತ್ ಇಬ್ಬರೂ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. 

ಡಿಎಸ್‌ಪಿ ಮಲ್ಲೇಶ್ ಗೌಡ ಮತ್ತು ಇನ್ಸ್‌ಪೆಕ್ಟರ್ ಸಂಜೀವ್ ಮಹಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ದಂಪತಿಗಳ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button