
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿನ್ನೆ ರಾತ್ರಿ ಬೆಳಗಾವಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ 100 ಕ್ಕೂ ಹೆಚ್ಚು ಲಾಡ್ಜ್ ಗಳನ್ನು ಪೊಲೀಸರು ಅನಿರೀಕ್ಷಿತವಾಗಿ ಪರಿಶೀಲನೆ ನಡೆಸಿದ್ದಾರೆ.
ಲಾಡ್ಜ್ ಗಳಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಕಡೆ ತಪಾಸಣೆ ಶುರುಮಾಡಿದ್ದು, ಇದು ಮುಂದುವರಿಯುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಲಾಡ್ಜ್ ಗಳ ಕೊಠಡಿಗಳನ್ನು ಸಹ ಪರಿಶೀಲಿಸಲಾಯಿತು. ಈ ಕಾರ್ಯಾಚರಣೆಯಲ್ಲಿ 50 ಕ್ಕೂ ಹೆಚ್ಚು ಪೊಲೀಸ್ ತಂಡಗಳು ಭಾಗಿಯಾಗಿದ್ದು ಎಸಿಪಿ ಮತ್ತು ಪಿಐ ನೇತೃತ್ವ ವಹಿಸಿದ್ದರು. ಈ ಅನಿರೀಕ್ಷಿತ ತಪಾಸಣೆ ಮುಂದುವರೆಯಲಿದೆ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.