ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭಿಸಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವೆ, ಇದು ಅಮೃತಕಾಲದ ಮೊದಲ ಬಜೆಟ್. ಇದು ಹಿಂದಿನ ಬಜೆಟ್ ಗಳ ದೃಢವಾದ ಅಡಿಪಾಯಗಳ ಮೇಲೆ ಸಿದ್ಧಗೊಂಡಿದೆ. ಯುವಕರು, ಮಹಿಳೆಯರು, ಎಸ್ ಸಿ ಎಸ್ ಟಿ ಅಭಿವೃದ್ಧಿಗೆ ಆದ್ಯತೆ ತೋರುವ ಬಜೆಟ್ ಇದಾಗಿದೆ ಎಂದರು.
ಕೋವಿಡ್ ಸೇರಿದಂತೆ ಹಲವು ಸವಾಲುಗಳ ನಡುವೆಯೇ ಭಾರತ ಉಜ್ವಲ ಭವಿಷ್ಯದತ್ತ ಹೆಜ್ಜೆ ಇಟ್ಟಿದ್ದು, ಭಾರತದ ಪ್ರಗತಿಯನ್ನು ಇಡೀ ಪ್ರಪಂಚವೇ ಕೊಂಡಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ದೇಶದಲ್ಲಿ ಯಾರೂ ಹಸಿವ್ವಿನಿಂದ ಬಳಲು ಕೇಂದ್ರ ಸರ್ಕಾರ ಬಿಡಲಿಲ್ಲ. 80 ಕೋಟಿ ಜನರಿಗೆ ಆಹಾರ ಒದಗಿಸಲಾಗಿದೆ ಎಂದರು.
ಈ ಬಾರಿ ಬಜೆಟ್ ನಲ್ಲಿ 7 ಅಂಶಗಳ ಆಧಾರದಲ್ಲಿ ಆದ್ಯತೆ ನೀಡಲಾಗಿದೆ
* ಸರ್ವರನ್ನು ಒಳಗೊಳ್ಳುವ ಅಭಿವೃದ್ಧಿ
* ಅಂಚಿನಲ್ಲಿರುವವರಿಗೂ ಸವಲತ್ತು
* ಮೂಲಸೌಕರ್ಯ
* ಸಾಮರ್ಥ್ಯದ ಬಳಕೆ
* ಹಸಿರು ಕ್ರಾಂತಿ
* ಯುವಶಕ್ತಿಗೆ ಉತ್ತೇಜನ-ಮಹಿಳಾ ಸಬಲೀಕರಣ
* ಆರ್ಥಿಕ ಸುಧಾರಣೆ
ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಪರಿಚಯಿಸಲಾಗುವುದು. ಉತ್ಪಾದನೆ ಹೆಚ್ಚಳ, ಹತ್ತಿ ಬೆಳೆಯುವ ಇಳುವರಿ ವೃದ್ಧಿ ಸೇರಿದಂತೆ ಕೃಷಿ ಅಭಿವೃದ್ಧಿಗೆ ಪೂರಕವಾದ ವಿಶೇಷ ಕೃಷಿ ಪ್ರಗತಿನಿಧಿ ಯೋಜನೆ ಆರಂಭಿಸುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾಸೀತಾರಾಮನ್ ಘೋಷಿಸಿದ್ದಾರೆ.
ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ಹಣಕಾಸು ಕ್ಷೇತ್ರದಲ್ಲಿ ಸುಧಾರಣೆಗೆ ಕ್ರಮಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಆರ್ಥಿಕ ಪ್ರಗತಿಗೆ ತಂತ್ರಜ್ಞಾನ ಬಳಕೆ ಮಾಡಲಾಗುವುದು.
ರಾಗಿ ಸೇರಿದಂತೆ ಸಿರಿಧಾನ್ಯಗಳ ಬೆಳೆ ಪದ್ಧತಿ ಸುಧಾರಣೆಗಾಗಿ ಸಂಶೋಧನೆ ನಡೆಸಲು ಹಾಗೂ ಉತ್ತಮ ಬೆಳೆ ಪದ್ಧತಿಗಾಗಿ ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಮಿಲೆಟ್ ರಿಸರ್ಚ್ ಸಂಸ್ಥೆ-ಸಿರಿಧಾನ್ಯ ಸಂಶೋಧನೆ ಸಂಸ್ಥೆಗೆ ಸೆಂಟರ್ ಆಫ್ ಎಕ್ಸಲೆನ್ಸ್ ಉಪಕ್ರಮದ ಮೂಲಕ ನೆರವು ನೀಡಲಾಗುವುದು.
* ಭ್ರದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ಘೋಷಣೆ
* ವಸತಿ ಕ್ಷೇತ್ರಕ್ಕೆ 79,000 ಕೋಟಿ ಅನುದಾನ
* ಕೃಷಿ ಸಾಲಕ್ಕಾಗಿ 20 ಲಕ್ಷ ಕೋಟಿ ಮೀಸಲು
* ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ಮೀಸಲು
*ರೈಲ್ವೆ ವಲಯಕ್ಕೆ 2.40 ಲಕ್ಷ ಕೋಟಿ ಮೀಸಲು
* ಗಿರಿಜನ ಪ್ರದೇಶಗಳಲ್ಲಿ ಏಕಲವ್ಯ ಮಾದರಿ ಶಾಲೆ ಸ್ಥಾಪನೆ-38,800 ಶಿಕ್ಷಕರ ನೇಮಕ
*ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಘೋಷಣೆ ಶೇ.7.5ರಷ್ಟು ಬಡ್ಡಿ
* ಸಣ್ಣ ಉಳಿತಾಯ ಯೋಜನೆಯಡಿ ಹಿರಿಯ ನಾಗರಿಕರಿಗೆ ಹೂಡಿಕೆ ಮಿತಿ ಹೆಚ್ಚಳ – 15 ಲಕ್ಷಕ್ಕೆ ಇದ್ದ ಮಿತಿ 30 ಲಕ್ಷಕ್ಕೆ ವಿಸ್ತರಣೆ
*ತೆರಿಗೆ ಪಾವತಿಗೆ ಹೊಸ ಫಾರ್ಮ್, 16 ದಿನಗಳಲ್ಲಿ ಐಟಿ ರಿಟರ್ನ್ಸ್ ಪಡೆಯಬಹುದು
*7 ಲಕ್ಷದವರೆಗೆ ತೆರಿಗೆ ವಿನಾಯಿತಿ ಘೋಷಣೆ
ಕೇಂದ್ರ ಬಜೆಟ್ ಗೆ ಪ್ರಧಾನಿ ಮೋದಿ ಸಂಪುಟ ಅನುಮೋದನೆ
https://pragati.taskdun.com/union-budget-2023nirmala-seetaramanlokasabhe-2/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ