ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಹೊಸ ತೆರಿಗೆ ಪದ್ಧತಿ ಹಾಗೂ ಹಳೆ ತೆರಿಗೆ ಪದ್ಧತೆ ಎರಡೂ ಜಾರಿಯಲ್ಲಿರಲಿದ್ದು, ಹೊಸ ತೆರಿಗೆ ಪದ್ದತಿಯಲ್ಲಿ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ತೆರಿಗೆ ಹೊರೆಯನ್ನು ಇಳಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ವೈಯಕ್ತಿಕ ತೆರಿಗೆಯಲ್ಲಿ ಇನ್ಮುಂದೆ 3 ಲಕ್ಷ ಆದಾಯದವರೆಗೂ ಯಾವುದೇ ತೆರಿಗೆ ಪಾವತಿಸುವಂತಿಲ್ಲ ಎಂದರು.
3 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ. 3ರಿಂದ 5 ಲಕ್ಷದವರೆಗೆ ಶೆ.5 ರಷ್ಟು ತೆರಿಗೆ, 6ರಿಂದ 9ಲಕ್ಷದವರೆಗೆ ಶೇ.10 ರಷ್ಟು ತೆರಿಗೆ, 9ರಿಂದ 12 ಲಕ್ಷದವರೆಗೆ ಶೇ.15 ರಷ್ಟು ತೆರಿಗೆ ಪಾವತಿಸಬೇಕು.
ಇನ್ನು ಸೇವಾ ಸುಂಕವನ್ನು 37ರಿಂದ 27 ಪರ್ಸೆಂಟ್ ಗೆ ಇಳಿಸಲಾಗಿದೆ. ದೊಡ್ಡಮೊತ್ತದ ವಿಮಾ ಪಾಲಿಸಿಗಳಿಗೆ ತೆರಿಗೆ ವಿಧಿಸಲಾಗುತ್ತದೆ. 10ಕೋಟಿಗೂ ಅಧಿಕ ಮೊತ್ತದ ಆಸ್ತಿ ಮಾರಾಟದಿಂದ ಸಿಗುವ ಲಾಭದ ಮೇಲೆ ಕ್ಯಾಪಿಟಲ್ ಗೇನ್ ತೆರಿಗೆ ವಿಧಿಸಲಾಗುವುದು ಎಂದು ತಿಳಿಸಿದರು. ಇನ್ನು ಐಟಿ ರಿಟರ್ನ್ಸ್ ಗೆ ಹೊಸ ಫಾರ್ಮ್ ಜಾರಿಯಾಗಲಿದೆ ಎಂದು ಹೇಳಿದರು.
*ಕೇಂದ್ರ ಬಜೆಟ್; ಕರ್ನಾಟಕಕ್ಕೆ ಬಂಪರ್ ಗಿಫ್ಟ್*
https://pragati.taskdun.com/union-budget-2023central-governmentnirmala-sitaramanbhadra-meldande-yojane/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ