ಪ್ರಗತಿವಾಹಿನಿ ಸುದ್ದಿ: ಮೊರಾರ್ಜಿ ದೇಸಾಯಿ ಭಾರತದಲ್ಲಿ ಅತಿಹೆಚ್ಚು ಬಾರಿ ಅಂದರೆ 6 ಬಾರಿ ಬಜೆಟ್ ಮಂಡನೆ ಮಾಡಿರುವ ದಾಖಲೆ ಇದೆ. ಆದರೆ ಇಂದು ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು 7 ನೇ ಬಾರಿಗೆ ಬಜೆಟ್ ಮಂಡನೆ ಮಾಡಿ ದಾಖಲೆ ಮಾಡಲಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾದ ಬಳಿಕ ಎನ್‌ಡಿಎ ಕೂಟದ ಸರ್ಕಾರದ 3ನೇ ಅವಧಿಯ ಮೊದಲ ಬಜೆಟ್ ಇಂದು ಮಂಡನೆಯಾಗಲಿದೆ. ಕೇಂದ್ರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿದ್ದು, ಬೆಳಗ್ಗೆ 11 ಗಂಟೆಗೆ 2024-25ರ ಹಣಕಾಸು ವರ್ಷದ ಈ ಪೂರ್ಣ ಬಜೆಟ್ ಅನ್ನು ಮಂಡಿಸಲಿದ್ದಾರೆ.
ದೇಶದಲ್ಲಿ ಏ.7ರಂದು (1860) ಭಾರತದ ಮೊದಲ ಬಜೆಟ್ ಜೇಮ್ಸ್ ವಿಲ್ಸನ್ ಮಂಡಿಸಿದ್ದರು. ಇದಾದ ನಂತರ ಸ್ವತಂತ್ರ ಭಾರತದಲ್ಲಿ ಷಣ್ಮುಖಂ ಚೆಟ್ಟಿ ಅವರು ಮೊದಲ ಸಲ (1947, ನ.26) ಬಜೆಟ್ ಮಂಡಿಸಿದ್ದರು.
ಕೇಂದ್ರದ ಈ ಬಜೆಟ್ ಭಾಷಣ ಕುರಿತಾದ ಮಂಡನೆ ನೇರ ಪ್ರಸಾರವನ್ನು, ಸಂಸದ್ ಟಿವಿ ಮತ್ತು ದೂರದರ್ಶನ್ ಟಿವಿಯಲ್ಲಿ ವೀಕ್ಷಿಸಬಹುದು. ಇದೇ ವಾಹಿನಿಗಳ ಯೂಟ್ಯೂಬ್ ಚಾನಲ್‌ಗಳ ವೇದಿಕೆಯಲ್ಲೂ ಬಜೆಟ್ ಲೈವ್ ಇರಲಿದೆ. ಇಂಡಿಯಾ ಬಜೆಟ್ ಜಾಲತಾಣದಲ್ಲೂ ಲೈವ್ ಸ್ಟ್ರೀಮ್ ಇರಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ