ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕೆ. ಎಲ್. ಎಸ್. ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಬಿ.ಕಾಂ ವಿಭಾಗದಿಂದ ಯುನಿಯನ್ ಬಜೆಟ್ ೨೦೧೯-೨೦ . ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಈ ಉಪನ್ಯಾಸಕ್ಕೆ ಡಾ. ಎ. ಬಿ. ಕಾಲಕುಂದ್ರಿಕರ್ ಹಾಗೂ ಕೃಷ್ಣಾ ಕೇಳಕರ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್. ಎಚ್. ವೀರಾಪೂರ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಾ. ಎ.ಬಿ.ಕಾಲಕುಂದ್ರಿಕರ್ ವಿದ್ಯಾರ್ಥಿಗಳನ್ನು ಉದ್ದೇಶಿ ಮಾತನಾಡುತ್ತಾ, ವಿದ್ಯಾರ್ಥಿಗಳಾದವರು ತಮ್ಮ ಜವಾಬ್ದಾರಿಗಳನ್ನು ಅರಿಯಬೇಕು ಮತ್ತು ಸಾಮಾನ್ಯ ವ್ಯಕ್ತಿಗಳು ನ್ಯಾಯಬದ್ಧವಾಗಿ ಹಣಕಾಸಿನ ಪ್ರಯೋಜನಗಳನ್ನು ಯಾವ ರೀತಿಯಾಗಿ ಪಡೆಯಬೇಕೆಂಬುದನ್ನು ವಿವರಿಸಿದರು. ಅಲ್ಲದೆ ದೇಶದ ಆರ್ಥಿಕ ಪ್ರಗತಿಗೆ ಯುನಿಯನ್ ಬಜೆಟ್ ತುಂಬಾ ಸಹಕಾರಿಯಾಗಿದೆ ಎಂದರು.
ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ಕೃಷ್ಣಾ ಕೇಳಕರ್ ಸೇವಾ ಅವಧಿಯಲ್ಲಿರುವ ಎಲ್ಲ ನೌಕರರಿಗೆ ಧೀರ್ಘಕಾಲದ ತೆರಿಗೆಯಿಂದಾಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಶ್ರೇಷ್ಠಾ ಮತ್ತು ದರ್ಷನಾ ನಿರೂಪಿಸಿದರು. ಪ್ರೋ. ರೂಪಾಲಿ ಕುಲಕರ್ಣಿ ಸ್ವಾಗತಿಸಿದರು. ಪ್ರೋ. ಅಶ್ವಿನಿ ನಾಯಿಕ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ