ಪ್ರಗತಿವಾಹಿನಿ ಸುದ್ದಿ: ಕೇಂದ್ರ ಬಜೆಟ್-2024-25ನೇ ಸಾಲಿನ ಆಯವ್ಯಯ ಮಂಡನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.0 ಸರ್ಕಾರದ ಮೊದಲ ಬಜೆಟ್ ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ನಲ್ಲಿ ಮಡಿಸಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಭಾಷಣ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾರಿರುವ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ತಿಳಿಸಿದರು.
ಭಾರತದ ಆರ್ಥಿಕತೆ ಅಭಿವೃದ್ಧಿಯಾಗಿದೆ. ಪ್ರಧಾನಿ ಮೋದಿ ಆಡಳಿತದಲ್ಲಿ ಅರ್ಥವ್ಯವಸ್ಥೆಗೆ ಶರವೇಗ ಸಿಕ್ಕಿದೆ ಎಂದು ಹೇಳಿದರು.
ಪ್ರಮುಖಾಂಶಗಳು:
ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ.ಘೋಷಣೆ
ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್
ವರ್ಷದಲ್ಲಿ 1ಕೋಟಿ ರೈತರು ನೈಸರ್ಗಿಕ ಕೃಷಿ ವ್ಯಾಪ್ತಿಗೆ
ಶಿಕ್ಷಣ, ಕೌಶಲ್ಯ, ಉದ್ಯೋಗ ಅಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲು
ಮೊದಲಬಾರಿ ಉದ್ಯೋಗ ಮಾಡುವವರಿಗೆ ಒಂದು ತಿಂಗಳು ಸರ್ಕಾರದಿಂದಲೇ ಸಂಬಳ
ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ 10 ಲಕ್ಷದವರೆಗೆ ಸಾಲ ಸೌಲಭ್ಯ
5 ವರ್ಷಗಳಲ್ಲಿ 4.1 ಕೋಟಿ ಯುವಜನತೆಗೆ ಉದ್ಯೋಗ ಯೋಜನೆ
5 ವರ್ಷಗಳಲ್ಲಿ ಟಾಪ್-500 ಕಂಪನಿಗಳಲ್ಲಿ ಒಂದು ಕೋಟಿ ಯುವಜನತೆಗೆ ಇಂಟರ್ನ್ ಶಿಪ್ ಅವಕಾಶ
ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ
ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ.
ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣ
ಆಂಧ್ರಪ್ರದೇಶಕ್ಕೆ 15,000 ಕೋಟಿ ಆರ್ಥಿಕ ನೆರವು ಘೋಷಣೆ
ಬಿಹಾರಕ್ಕೆ 26,000 ಕೋಟಿ ಅನುದಾನ ಘೋಷಣೆ
ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ 5 ವರ್ಷ ವಿಸ್ತರಣೆ
ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು
ಗಯಾದ ವಿಷ್ಣುಪಾದ ದೇವಾಲಯ, ಮಹಾಬೋಧಿ ದೇವಾಲಯಗಳಿಗೆ ಕಾರಿಡಾರ್ ನಿರ್ಮಾಣ
ನಳಂದ ವಿಶ್ವವಿದ್ಯಾಲಯಕ್ಕೆ ವಿಶೇಷ ಅನುದಾನ
ತೆರಿಗೆ ಸ್ಲ್ಯಾಬ್ ನಲ್ಲಿ ಕೆಲ ಬದಲಾವಣೆ ಘೋಷಣೆ
ಮೊಬೈಲ್, ಚಾರ್ಜರ್ ತೆರಿಗೆ ಕಡಿತ
ಚಿನ್ನ, ಬೆಳ್ಳಿ ಮೇಲೆ ಕಸ್ಟಮ್ಸ್ ತೆರಿಗೆ ಶೇ.6ರಷ್ಟು ಕಡಿತ
ಸ್ಟ್ಯಾಂಡರ್ಡ್ ಡಿಡಕ್ಷನ್ 75 ಸಾವಿರಕ್ಕೆ ಹೆಚ್ಚಳ
ಮೂರು ಕ್ಯಾನ್ಸರ್ ಔಷಧಗಳ ದರ ಇಳಿಕೆ
100 MW ವಾಣಿಜ್ಯ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ
ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಘೋಷಣೆ- ಮನೆ ಮೇಲ್ಛಾವಣಿಗಳ ಮೇಲೆ ಸೌರ ಫಲಕ ಅಳವಡಿಕೆ
ದೇಶದಲ್ಲಿ 12 ಹೊಸ ಇಂಡಸ್ಟ್ರಿಯಲ್ ಪಾರ್ಕ್ ಗಳ ನಿರ್ಮಾಣ
ಮಹಿಳೆಯರಿಗೆ 3 ಸಾವಿರ ಕೋಟಿ ಅನುದಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ