Kannada NewsLatestNationalPolitics

*ಬಡವರಿಗೆ 2 ಕೋಟಿ ಮನೆ ಮೋದಿ ಸರ್ಕಾರದ ಗ್ಯಾರಂಟಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ*

ವಿಕಸಿತ-ಪ್ರಗತಿಶೀಲ ಭಾರತದ ಬಜೆಟ್; ಪ್ರಹ್ಲಾದ್ ಜೋಶಿ ಶ್ಲಾಘನೆ


ಪ್ರಗತಿವಾಹಿನಿ ಸುದ್ದಿ: ಮುಂದಿನ 5 ವರ್ಷಗಳಲ್ಲಿ 2 ಕೋಟಿ ಮನೆಗಳನ್ನು ಬಡವರಿಗೆ ಒದಗಿಸುವ ಗುರಿಯೇ “ಮೋದಿ ಸರ್ಕಾರದ ಗ್ಯಾರಂಟಿ” ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) 3 ಕೋಟಿ ಮನೆಗಳ ಹಂಚಿಕೆ ಗುರಿ ಸಾಧನೆ ಸಮೀಪದಲ್ಲಿದ್ದು, ಮುಂದಿನ 5 ವರ್ಷಗಳಲ್ಲಿ ಹೆಚ್ಚುವರಿ 2 ಕೋಟಿ ಮನೆಗಳ ಹಂಚಿಕೆ ಗುರಿ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ.

ವಿಕಸಿತ-ಪ್ರಗತಿಶೀಲ ಭಾರತಕ್ಕೆ ಪೂರಕ ಬಜೆಟ್ ಲೋಕಸಭಾ ಚುನಾವಣೆ ಪೂರ್ವ ನಮ್ಮ ಕೇಂದ್ರ ಬಜೆಟ್ ಪ್ರಗತಿಶೀಲ ಭಾರತಕ್ಕೆ ಪೂರಕವಾಗಿದೆ ಎಂದು ಜೋಶಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಶ್ರೀಸಾಮಾನ್ಯರ ಪರವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ದೂರದೃಷ್ಟಿ ಮತ್ತು ಪರಿವರ್ತನಾಶೀಲ, ವಿಕಸಿತ ಭಾರತದ ಬಜೆಟ್ ಇದಾಗಿದೆ ಎಂದಿರುವ ಜೋಶಿ ಅವರು, 7 ಲಕ್ಷ ರು. ಆದಾಯ ಇರುವ ಮದ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ಕೊಟ್ಟು ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದ್ದಾರೆ.

1 ಕೋಟಿ ಮನೆಗಳಿಗೆ ಸೋಲಾರ್ ವಿದ್ಯುತ್, ಕಾರ್ಪೋರೇಟ್ ಟ್ಯಾಕ್ಸ್ ಶೇ.22ಕ್ಕೆ ಇಳಿಕೆ, ವಿಮಾನ ನಿಲ್ದಾಣ, ವಿಮಾನಗಳ ಸಂಖ್ಯೆ ಹೆಚ್ಚಳ, ಪ್ರವಾಸೋದ್ಯಮ ಅಭಿವೃದ್ಧಿ, ರೈಲ್ವೆ ಸೌಲಭ್ಯ ಹೀಗೆ ಸಮತೋಲಿತ ಬಜೆಟ್ ಇದಾಗಿದೆ ಎಂದು ಸಚಿವ ಜೋಶಿ ಪ್ರತಿಪಾದಿಸಿದ್ದಾರೆ.

ಸರ್ವ ವರ್ಗದ ಅಗತ್ಯ ಆಶೋತ್ತರಗಳಿಗೆ ಸ್ಪಂದಿಸಿ, ವಿಕಸಿತ-ಪ್ರಗತಿಶೀಲ ಭಾರತದ ಬಜೆಟ್ ಪ್ರಸ್ತುತಪಡಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವ ಜೋಶಿ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button