Kannada NewsKarnataka NewsLatest

*ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ದಂಪತಿ*

ಪ್ರಗತಿವಾಹಿನಿ ಸುದ್ದಿ: ಸಾಲಗಾರರ ಕಿರುಕುಳಕ್ಕೆ ಬೇಸತ್ತ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಆಲಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಶ್ವ (34) ಹಾಗೂ ಪತ್ನಿ ಸುಷ್ಮಾ (28) ಮೃತ ದುರ್ದೈವಿಗಳು. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ.

Home add -Advt

ತರಕಾರಿ ವ್ಯಾಪಾರ ಮಾಡುತ್ತಿದ್ದ ವಿಶ್ವ ತನಗೆ ಪರಿಚಿತನಿದ್ದ ಶಿವು ಎಂಬಾತನಿಗೆ 5 ಲಕ್ಷ ರೂಪಾಯಿ ಸಾಲ ಕೊಡಿಸಿದ್ದರು. ತನ್ನ ಬಳಿ ಇದ್ದ ಒಡವೆಯನ್ನು ಅಡವಿಟ್ಟು ಕೆಲವರ ಬಳಿ ಸಾಲ ಪಡೆದು ಶಿವುಗೆ ಸಹಾಯ ಮಾಡಿದ್ದರು. ಆದರೆ ಶಿವು ಸರಿಯಾದ ಸಮಯಕ್ಕೆ ಹಣ ವಾಪಾಸ್ ನೀಡಿಲ್ಲ. ಸಾಲವನ್ನೂ ತೀರಿಸಿಲ್ಲ.

ಸಾಲ ತೀರಿಸದಿದ್ದರೆ ಒಡವೆ ಕೊಡಲು ಸಧ್ಯವಿಲ್ಲ ಎಂದು ಹಣ ನೀಡಿದವರು ಹೇಳಿದ್ದಾರೆ. ಇದರಿಂದ ನೊಂದ ವಿಶ್ವ ಹಾಗೂ ಪತ್ನಿ ಸುಷ್ಮಾ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button