National

*ಭಿವಂಡಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೊಲ್ಲೆ ದಂಪತಿಯಿಂದ ಅಬ್ಬರದ ಪ್ರಚಾರ*

ಪ್ರಗತಿವಾಹಿನಿ ಸುದ್ದಿ; ಮೇ 20 ರಂದು ನಡೆಯಲಿರುವ ಮಹಾರಾಷ್ಟ್ರ ಲೋಕಸಭಾ ಚುನಾವಣೆ ಅಂಗವಾಗಿ ಮುಂಬೈನ ಭಿವಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಕಪಿಲ ಮೋರೆಶ್ವರ ಪಾಟೀಲ ಅವರ ಪ್ರಚಾರಾರ್ಥವಾಗಿ (ಲಾಹೋಟಿ ಕಾಲನಿಯಲ್ಲಿ) ಕರ್ನಾಟಕದ ವ್ಯಾಪಾರಸ್ಥರ ಮಳಿಗೆಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಮಾಜಿ ಸಚಿವೆ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ತೆರಳಿ ಕ್ಷೇತ್ರದಲ್ಲಿ ಮುಂದೆಯೂ ಅಭಿವೃದ್ದಿ ಕಾರ್ಯಗಳು ನಿರಂತರವಾಗಿರಲು ಕಮಲದ ಗುರುತಿಗೆ ಮತ ನೀಡಿ,ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಯನ್ನು ಬಲಪಡಿಸಲು, ಮೇ 20 ರಂದು ಕಪಿಲ ಮೋರೇಶ್ವರ ಪಾಟೀಲ ಅವರ ಕ್ರಮ ಸಂಖ್ಯೆ 1ರ “ಕಮಲ” ದ ಗುರುತಿಗೆ ತಮ್ಮ ಅತ್ಯಮೂಲ್ಯ ಮತವನ್ನು ನೀಡುವುದರ ಮೂಲಕ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಬೆಂಬಲ ಕೋರಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖರಾದ ಸಂತೋಷ ಶೆಟ್ಟಿ,ನಿರಂಜನ ಹೆಗ್ಡೆ,ಜಿಲ್ಲಾ ಕಾರ್ಯದರ್ಶಿಗಳಾದ ಚಂದ್ರಶೇಖರ ಪೂಜಾರಿ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಹೀರಾಲಾಲ ಕೋರೆ,ಉತ್ತರ ಮಂಡಲ ಮಹಿಳಾ ಅಧ್ಯಕ್ಷರಾದ ಯಶವಂತಿ ಬಿಲ್ಲವ,ಮನೀಷಾ ಮಿಶ್ರಾ, ಅಮೃತ ಕುಲಕರ್ಣಿ,ಅಭಯ ಮಾನವಿ,ಸೇರಿದಂತೆ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Home add -Advt

Related Articles

Back to top button