ಪ್ರಗತಿವಾಹಿನಿ ಸುದ್ದಿ, ಮುಂಬೈ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕೈಗೆಟಕುವ ಬೆಲೆಯ ಕಾರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯವಾಗಿ ಉತ್ಪಾದಿಸುವಂತೆ ಮರ್ಸಿಡಿಸ್ ಬೆಂಝ್ ಕಂಪನಿಗೆ ಕೋರಿದ್ದಾರೆ.
ಕಂಪನಿಯ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಈ ಕಾರುಗಳ ಬೆಲೆಯನ್ನು ಸಹ ಸಾಮಾನ್ಯರ ಕೈಗೆಟುಕುವಂತೆ ಇರಿಸಲು ಕಂಪನಿಗೆ ಸಲಹೆಯಿತ್ತರು.
ಮಧ್ಯಮವರ್ಗದ ಜನರಿಗೆ ಮರ್ಸಿಡಿಸ್ ಕಂಪನಿಯ ದುಬಾರಿ ಕಾರುಗಳನ್ನು ಖರೀದಿಸುವುದು ಸಾಧ್ಯವಾಗುವುದಿಲ್ಲ ಎಂದ ಅವರು “ನಿಮ್ಮ ಕಾರುಗಳನ್ನು ನಾನು ಸಹ ಖರೀದಿಸಲು ಸಾಧ್ಯವಿಲ್ಲ” ಎಂದರು.
ಮರ್ಸಿಡಿಸ್ ಕಂಪನಿಯು ಭಾರತದಲ್ಲಿ EQS 580 4MATIC ಅನ್ನು ಬಿಡುಗಡೆ ಮಾಡಿದೆ. ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರುಗಳನ್ನು ಹೊರದೇಶದಿಂದ ತಂದ ಬಿಡಿಭಾಗಗಳನ್ನು ಸ್ಥಳೀಯವಾಗಿ ಜೋಡಿಸಿ ತಯಾರಿಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ