
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಬಹಿರಂಗವಾಗುತ್ತಿದ್ದಂತೆ 6 ಸಚಿವರು ತಮ್ಮದೂ ಸಿಡಿ ಹೊರಬರಬಹುದೆನ್ನುವ ಭೀತಿಯಿಂದ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು.
ಇದೀಗ ಕೇಂದ್ರ ಸಚಿವ ಸದಾನಂದ ಗೌಡ ಕೂಡ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನನ್ನ ನಕಲಿ ಸಿಡಿ ತಯಾರಿಸಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದರಿಂದ ನನ್ನ ಮಾನ ಹಾನಿಯಾಗಬಹುದು. ಹಾಗಾಗಿ ನನ್ನ ವಿರುದ್ಧದ ಸಿಡಿಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡಬೇಕು ಎಂದು ಅವರು ಬೆಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಅವರ ಕೋರಿಕೆಯನ್ನು ಮನ್ನಿಸಿದೆ.
ಕೆಲವರ ನಕಲಿ ಸಿಡಿಗಳನ್ನು ಉದಾಹರಿಸಿ ಸದಾನಂದಗೌಡ ಅರ್ಜಿ ಸಲ್ಲಿಸಿದ್ದಾರೆ. ಸದಾನಂದ ಗೌಡರಿಗೇಕೆ ಸಿಡಿ ಭಯ? ಯಾರಾದರೂ ಅಂತಹ ಸಿಡಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರಾ ಎನ್ನುವಪ್ರಶ್ನೆ ಎದ್ದಿದೆ.
ಪ್ರಿಯತಮನೊಂದಿಗೆ ಪತ್ನಿ ವಿವಾಹ ಮಾಡಿಸಿದ ಪತಿ