ಪ್ರಗತಿವಾಹಿನಿ ಸುದ್ದಿ, ಅಥಣಿ – ತಾಲೂಕಿನ ಜನವಾಡ ಗ್ರಾಮದ ನಿವಾಸಿಯಾದ ರಾಮು ಸದಾಶಿವ ಕಾಂಬಳೆ(೨೭) ದೀಪಾ ಕಾಂಬಳೆ ಎನ್ನುವರ ಜೊತೆ ಜನವಾಡ ಗ್ರಾಮದಲ್ಲಿ ವಿವಾಹವಾದರು.
ಮದುವೆಯಲ್ಲಿ “ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಿ ಸುರಕ್ಷಿತವಾಗಿರಿ, ಜೀವನ ಅಮೂಲ್ಯವಾದದ್ದು, ಮಾಸ್ಕ ಹಾಗೂ ಸ್ಯಾನಿಟೈಸರ್ ಸಮರ್ಪಕವಾಗಿ ಬಳಸಿ” ಎಂಬ ಘೋಷಣೆ ಬರೆದ ಪೋಸ್ಟರ ಹಿಡಿದು ಜೊತೆಗೆ ವಧು ವರ ಇಬ್ಬರು ಸಹ ಮಾಸ್ಕ ಧರಿಸಿ ಕೊರೋನಾ ಕುರಿತು ಜಾಗ್ರತಿಯನ್ನು ಮೂಡಿಸಿದರು.
ಮೂಲತಃ ಬೆಂಗಳೂರಿನ ಬೆಳಂದೂರು ಪೋಲಿಸ್ ಠಾಣೆಯಲ್ಲಿ ಪೋಲಿಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ರಾಮು ಕಾಂಬಳೆ, ಕೊರೋನಾ ಬಂದ ಸಂದರ್ಭದಲ್ಲಿ ಬೆಂಗಳೂರಿನ ತನ್ನ ಠಾಣೆಯಲ್ಲಿ ಅವಿರತವಾಗಿ ಸೇವೆಯನ್ನು ಸಲ್ಲಿಸಿದ್ದ, ಮೊದಲೆ ನಿಶ್ಚಯವಾದಂತೆ ದಿನಾಂಕ ನಿನ್ನೆ ಮದುವೆ ಮಾಡಿಕೊಂಡಿದ್ದು ಇಲ್ಲಿಯೂ ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮೆಚ್ಚುಗೆ ಪಾತ್ರವಾಗಿದ್ದಾನೆ,
ಮದುವೆಯ ಎಲ್ಲ ಕಾರ್ಯದಲ್ಲಿಯೂ ಕೂಡ ಎಲ್ಲರಿಗೂ ಸಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಹೇಳಿದ್ದು, ಸ್ಯಾನಿಟೈಜರ್ ಅನ್ನು ಕೂಡ ಎಲ್ಲ ಕಡೆ ಬಳಸಿ ಎಂಬ ಸಲಹೆ ನೀಡಿ ಊರಿನ ಎಲ್ಲ ಗ್ರಾಮಸ್ಥರಿಗೆ ಮಾದರಿಯಾಗಿದ್ದಾನೆ.
ಈ ವೇಳೆ ತೇರದಾಳ ಪೋಲಿಸ್ ಠಾಣೆಯ ಪಿ.ಎಸ್.ಆಯ್ ವಿಜಯ ಕಾಂಬಳೆ, ಸಂತೋಷ ಬಡಕಂಬಿ, ಚೇತನ ಶಾನವಾಡ, ನಾಗರಾಜ ಕಟ್ಟಿಮನಿ, ವಿಜಯ ಹೊಸಮನಿ, ಆದಿನಾಥ ಮುತ್ತೂರ, ಗೌತಮ ದೊಡಮನಿ, ಅಶೋಕ ವಾಜಂತ್ರಿ, ಯಮನಪ್ಪ ಬೋದ್ಲಿ, ಸಾಗರ ಮಾಲಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ