ವಿಶೇಷ ಚೇತನ ಮಕ್ಕಳಿಗಾಗಿಯೇ ವಿಶೇಷ ಪಾರ್ಕ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿಯಲ್ಲಿ ಎರಡು ವಿಶೇಷ ಪಾರ್ಕ್ ಗಳು ನಿರ್ಮಾಣವಾಗುತ್ತಿವೆ. ಒಂದು ಪ್ರಾಣಿಗಳಿಗಾಗಿಯೇ ಒಂದು ಪಾರ್ಕ್, ಮತ್ತೊಂದು ವಿಶೇಷ ಚೇತನ ಅದರಲ್ಲೂ ಮಾನಸಿಕ ಅಸ್ವಸ್ಥ ಮಕ್ಕಳಿಗಾಗಿ.
ಇಂತ ಎರಡು ಪಾರ್ಕ್ ಗಳ ನಿರ್ಮಾಣಕ್ಕಾಗಿ ಶಾಸಕ ಅಭಯ ಪಾಟೀಲ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.
ಪ್ರಾಣಿಗಳಿಗಾಗಿ ನಿರ್ಮಾಣವಾಗಲಿರುವ ಪಾರ್ಕ್ ಗೆ ಸುಮಾರು 1.60 ಕೋಟಿ ರೂ. ವೆಚ್ಚವಾಗಲಿದೆ. ವಿಶೇಷ ಚೇತನ ಮಕ್ಕಳಿಗಾಗಿ ನಿರ್ಮಾಣವಾಗಲಿರುವ ಪಾರ್ಕ್ ಗೆ 1.25 ಕೋಟಿ ರೂ. ವೆಚ್ಚವಾಗಲಿದೆ.
ವಿಶೇಷ ಚೇತನ ಮಕ್ಕಳ ಪಾರ್ಕ್ ಮಕ್ಕಳ ಸ್ಕಿಲ್ ಡೆವಲಪ್ ಮಾಡಲು ಸಹಾಯ ಮಾಡುವ ರೀತಿಯಲ್ಲಿ ನಿರ್ಮಾಣವಾಗಲಿದೆ. ಕಲರ್ ಥೆರಪಿ, ಟಚ್ ಥೆರಪಿ, ವೊಕೇಶನಲ್ ಟ್ರೇನಿಂಗ್ ಮೊದಲಾದವು ಇಲ್ಲಿರಲಿವೆ.
ಜೊತೆಗೆ ವಾಕಿಂಗ್ ಟ್ರ್ಯಾಕ್, ಶೌಚಾಲಯ, ಮಳೆಕೊಯ್ಲು ಮಾದರಿ, ಉಸುಕಿನ ಬಾಕ್ಸ್, ಸಣ್ಣ ಮನೆ, ಲೈಟಿಂಗ್ ಎಲ್ಲವೂ ಇಲ್ಲಿರಲಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ