ಪ್ರಗತಿವಾಹಿನಿ ಸುದ್ದಿ, ಲಂಡನ್: ಜಾಗತಿಕ ತಾಪಮಾನ ದಿನೇದಿನೇ ಏರಿಕೆಯಾಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಪ್ರಾಕೃತಿಕ ಸ್ಥಿತಿಗತಿಗಳಲ್ಲಾಗುತ್ತಿರುವ ಬದಲಾವಣೆಗಳು ಚಿತ್ರವಿಚಿತ್ರ ಅನುಭವಗಳನ್ನು ನೀಡುತ್ತಿವೆ.
ಇದೇ ಮೊದಲ ಬಾರಿ ಯುನೈಟೆಡ್ ಕಿಂಗ್ ಡಮ್ ನಲ್ಲಿ ರಸ್ತೆಗಳು ದಾಖಲೆ ಬಿಸಿಲಿನ ತಾಪಮಾನಕ್ಕೆ ಕರಗಿದ್ದು ವಾಹನ ಚಾಲನೆ ಮಾಡುವವರು ನಾನಾ ಬಗೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಹಲವಾರು ರಸ್ತೆಗಳು ಜಿಗುಟಾದ, ಕಪ್ಪು ಮುದ್ದೆಗಳಂತೆ ಆಗಿ ಕರಗಿದವು. ಮ್ಯಾಂಚೆಸ್ಟರ್‌ನ ಸ್ಟಾಕ್ ಪೋರ್ಟ್ ಪಟ್ಟಣದ ಸ್ಥಳೀಯರೊಬ್ಬರು “ನನ್ನ ಕಾರು ನೀರಿನಲ್ಲಿ ಚಲಿಸುತ್ತಿರುವಂತೆ ಭಾಸವಾಗುತ್ತಿದೆ” ಎಂದು ಹೇಳಿದರು.
“ಕರಗಿದ ರಸ್ತೆಯಲ್ಲಿ ನಡೆದರೆ ಪಾದಗಳು ಅದರಲ್ಲಿ ಸಿಲುಕಿಕೊಂಡವು. ನನ್ನ ವಾಹನದ ಟೈರ್‌ಗಳ ಟ್ರೆಡ್‌ಗಳಲ್ಲಿ ಡಾಂಬರ್ ಸಿಕ್ಕಿಹಾಕಿಕೊಂಡಿದೆ” ಎಂದು ವಾಹನ ಚಾಲಕರೊಬ್ಬರು ಹೇಳಿಕೊಂಡಿದ್ದಾರೆ.
ಅಂದವಾಗಿ ಕಾಣುತ್ತಿದ್ದ ರಸ್ತೆಗಳೆಲ್ಲ ಮಳೆಗಾಲದಲ್ಲಿ ನೀರಲ್ಲಿ ತೊಯ್ದ ರಸ್ತೆಗಳಂತೆ ಗೋಚರಿಸತೊಡಗಿವೆ. ರಸ್ತೆಗಳು ಕರಗಲು ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಗೆ ತಲುಪಬೇಕು ಎಂದು ರೋಡ್ ಸರ್ಫೇಸ್ ಟ್ರೀಟ್ ಮೆಂಟ್ ಅಸೋಸಿಯೇಶನ್ ಹೇಳಿದೆ.
ಅಂತರ್ಜಾಲದಲ್ಲಿ ರಣಬೀರ್ ಸಿಂಗ್ ಬೆತ್ತಲೆ ಪೋಸ್ ಮಾಯಾಜಾಲ !
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ