Latest

ಅನೈಸರ್ಗಿಕ ಲೈಂಗಿಕ ಕಿರುಕುಳ; ಪೌರಸೇವಾ ನೌಕರ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ, ಮುಂಬೈ: ವ್ಯಕ್ತಿಯೊಬ್ಬನಿಗೆ  ಅನೈಸರ್ಗಿಕ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ  ಪೌರಸೇವಾ ನೌಕರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್  ನೌಕರನಾಗಿರುವ  ಆರೋಪಿ ತನ್ನ ಬಳಿ 6 ಸಾವಿರ ರೂ. ಕೇಳಿದ್ದ. ಸಕಾಲಕ್ಕೆ ನೀಡಿಲ್ಲವೆಂದು ಸಿಟ್ಟಿಗೆದ್ದಿದ್ದ.  ಜು. 6ರಂದು ಆತನಿಗೆ ಹಣ ನೀಡಿದ ನಂತರ ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ತನ್ನೊಂದಿಗೆ ಬಲವಂತದಿಂದ  ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ.

ಇಷ್ಟಕ್ಕೇ ತನ್ನನ್ನು ಬಿಡದೆ ತನ್ನ ಗುಪ್ತಾಂಗಗಳನ್ನು ಸುಟ್ಟು ವಿಕೃತಿ ಮೆರೆದಿದ್ದಾನೆ ಎಂದು 33 ವರ್ಷದ ಸಂತ್ರಸ್ತ ವ್ಯಕ್ತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Home add -Advt

ಹಾಸ್ಟೇಲ್ ವಿದ್ಯಾರ್ಥಿನಿಯರಿಗೆ ವಾರ್ಡನ್ ಪತಿಯಿಂದ ಕಿರುಕುಳ

Related Articles

Back to top button