Kannada NewsKarnataka NewsLatest

ಸೆ.26ರಂದು ದಿ.ಸುರೇಶ ಅಂಗಡಿ ಪುತ್ಥಳಿ ಅನಾವರಣ: ಸಿಎಂ ಸೇರಿ ಹಲವು ಗಣ್ಯರ ಆಗಮನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರದ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ಸೆ.26ರಂದು ನಡೆಯಲಿದೆ.

ಅಂದು ಬೆಳಗ್ಗೆ 10.30ಕ್ಕೆ ಸುರೇಶ ಅಂಗಡಿ ಎಜುಕೇಶನ್ ಇನ್ ಸ್ಟಿಟ್ಯೂಟ್ ಆವರಣದಲ್ಲಿ ಪುತ್ಥಳಿ ಅನಾವರಣಗೊಳ್ಳಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್ ಸೇರಿದಂತೆ ಹಲವಾರು ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಸುರೇಶ ಅಂಗಡಿ ಕೇಂದ್ರದ ರೈಲ್ವೆ ಸಚಿವರಾಗಿ ಕೆಲಸ ಮಾಡುತ್ತಿರುವಾಗಲೇ, 2020ರ ಸೆಪ್ಟಂಬರ್ 23ರಂದು ಕೊರೋನಾದಿಂದಾಗಿ ನಿಧನರಾದರು. ಸಚಿವರಾಗಿ ಬೆಳಗಾವಿ ಹಾಗೂ ರಾಜ್ಯಕ್ಕೆ ಹಲವಾರು ಮಹತ್ವದ ಕೊಡುಗೆಗಳನ್ನು ನೀಡುವ ಮೂಲಕ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ.

ನಂತರ ನಡೆದ ಚುನಾವಣೆಯಲ್ಲಿ  ಅವರ ಪತ್ನಿ ಮಂಗಲಾ ಅಂಗಡಿ ಬೆಳಗಾವಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Home add -Advt

ಇದೀಗ ಸುರೇಶ ಅಂಗಡಿ ಅವರ ಪುತ್ಥಳಿಯನ್ನು ಅವರು ಕಟ್ಟಿ ಬೆಳೆಸಿದ ಕಾಲೇಜಿನ ಆವರಣದಲ್ಲಿ ಸ್ಥಾಪಿಸಲಾಗಿದೆ.

ಸುರೇಶ ಅಂಗಡಿ ಕುಟುಂಬಕ್ಕೆ ಸಿಎಂ ಸಾಂತ್ವನ; ಅಂಗಡಿ ಸ್ಮಾರಕ ಭರವಸೆ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button