Belagavi NewsBelgaum NewsKannada NewsKarnataka NewsLatest

ಪಾರಿವಾಳ ವಿಷಯವಾಗಿ ಗಲಾಟೆ: ಗುಂಪುಗಳ ಮಧ್ಯೆ ಮಾರಾ ಮಾರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸ್ತವಾಡ ಗ್ರಾಮದ ಜೈನ ಜಾತ್ರೆ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾ ಮಾರಿ ನಡೆದಿದೆ. ಹಿರೇಬಾಗೇವಾಡಿ ಮತ್ತು ಮಾಳಮಾರುತಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿ 9 ಜನರನ್ನು ಬಂಧಿಸಲಾಗಿದೆ.

ಜಾತ್ರೆಗೆ ಬಂದಿದ್ದ ಆದಿತ್ಯಾ ಕಲ್ಲಪ್ಪ ಪಾಟೀಲ ಮತ್ತು ದರ್ಶನ ಬಾಹುಬಲಿ ಕುಡಚಿ ಇವರಿಬ್ಬರ ಮಧ್ಯೆ ಪಾರಿವಾಳ ವಿಷಯದ ಸಲುವಾಗಿ ರೂ.1500/- ಗಳನ್ನು ಕೊಡುವ ಬಗ್ಗೆ ವಾದ ವಿವಾದ ಉಂಟಾಗಿ ಗಲಾಟೆಯಾಗಿದೆ.

ಹಿರೇಬಾಗೇವಾಡಿ ಠಾಣೆಯ ಪ್ರಕರಣದ ಆರೋಪಿ

ಆದಿತ್ಯಾ ಕಲ್ಲಪ್ಪ ಪಾಟೀಲ ಹಾಗೂ ಆತನೊಂದಿಗೆ ಇನ್ನೂ 8 ಜನ ಸೇರಿ ದರ್ಶನ ಬಾಹುಬಲಿ ಕುಡಚಿಯನ್ನು ಹೊಡೆದಿದ್ದು, ಈ ವಿಷಯವಾಗಿ ಹಿರೇಬಾಗೇವಾಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದರಲ್ಲಿ ಮೂರು (3) ಆರೋಪಿಗಳನ್ನು ಹಿರೇಬಾಗೇವಾಡಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನವರು ಎಂದು ಗೊತ್ತಾಗಿದೆ.

ಮುಂದುವರೆದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ ಬಾಹುಬಲಿ ಕುಡಚಿ ಈತನ ಸಹಚರರು ಕೂಡಿಕೊಂಡು ಇದೇ ಸಿಟ್ಟಿನಿಂದ ಬಸವನ ಕುಡಚಿಗೆ ಬಂದು ಆದಿತ್ಯಾ ಕಲ್ಲಪ್ಪ ಪಾಟೀಲನ ಮನೆಗೆ ಹೋಗಿ ಆದಿತ್ಯ ಎಲ್ಲಿದ್ದಾನೆ ಎಂದು ಆತನ ಸಹೋದರ ಮತ್ತು ತಂದೆಗೆ ಹೊಡೆದಿದ್ದಾರೆ.

ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಆರು (6) ಜನರನ್ನು ಮಾಳಮಾರುತಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button