ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ವರಿಷ್ಟ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರಿಂದ ವಯನಾಡು ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು, ಬಳಿಕ ಸಂಸದೆಯಾಗಿ ಆಯ್ಕೆಯಾದ ಪ್ರಿಯಾಂಕಾ ವಾದ್ರಾ ಸಂಸತ್ ಪ್ರವೇಶಿಸಿ ಇಂದು ಪ್ರಮಾನವಚನ ಸ್ವೀಕರಿಸಿದ್ದಾರೆ.
ಪ್ರಮಾಣವಚನ ಸ್ವೀಕಾರ ವೇಳೆ ಪ್ರಿಯಾಂಕಾ ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದು ಗಮನ ಸೆಳೆದಿದ್ದಾರೆ. ಕೇರಳದ ಪಾರಂಪರಿಕ ಕೈಮಗ್ಗ ಸೀರೆಯಾದ ಬಿಳಿ ಬಣ್ಣದ ಕಸವು ಸೀರೆಯುಟ್ಟು ಪ್ರಿಯಾಂಕಾ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ್ರು.
ಇತ್ತೀಚೆಗೆ ಮುಕ್ತಾಯಗೊಂಡ ವಯನಾಡು ಬೈ ಎಲೆಕ್ಷನ್ ನಲ್ಲಿ ಪ್ರಿಯಾಂಕಾ ವಾದ್ರಾ, 6 ಲಕ್ಷಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಜಯಗಳಿಸಿದ್ದರು. ನವೆಂಬರ್ 25 ರಿಂದ ಸಂಸತ್ ಅಧಿವೇಶನ ಶುರುವಾಗಿದ್ದು, ಹಲವು ವಿಚಾರಕ್ಕೆ ಕಲಾಪದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ.
ಪ್ರಿಯಾಂಕಾ ವಾದ್ರಾ ಮಣಿಪುರ ಹಿಂಸಾಚಾರ, ಸಂಭಾಲ್ ಗಲಭೆ ಬಗ್ಗೆ ಕಲಾಪದಲ್ಲಿ ಧ್ವನಿ ಎತ್ತಿದ್ದಾರೆ. ಸದನದಲ್ಲಿ ಗದ್ದಲ ಹೆಚ್ಚಾಗ್ತಿದ್ದಂತೆ ಸ್ಪೀಕರ್ ಕಲಾಪವನ್ನು ಮುಂದೂಡಿಕೆ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ