Latest

ಉತ್ತರ ಪ್ರದೇಶದ ಮೊರಾದಾಬಾದ್ ವಿಶ್ವದ ಎರಡನೇ ಅತಿ ಹೆಚ್ಚು ಶಬ್ದ ಮಾಲಿನ್ಯದ ನಗರ, ಮೊದಲ ಸ್ಥಾನದಲ್ಲಿ ಬಾಂಗ್ಲಾದ ಢಾಕಾ

ಪ್ರಗತಿ ವಾಹಿನಿ ಸುದ್ದಿ ನವದೆಹಲಿ – 

ವಿಶ್ವ ಆರೋಗ್ಯ ಸಂಸ್ಥೆ ವಿಶ್ವದ ವಿವಿಧ ನಗರಗಳಲ್ಲಿನ ಶಬ್ದ ಮಾಲಿನ್ಯದ ಪಟ್ಟಿ ಮಾಡಿದ್ದು ಉತ್ತರ ಪ್ರದೇಶದ ಮೊರಾದಾಬಾದ್ ವಿಶ್ವದಲ್ಲೇ ಎರಡನೇ ಹೆಚ್ಚು ಶಬ್ದ ಮಾಲಿನ್ಯ ಹೊಂದಿದ ನಗರವಾಗಿದೆ.

ವಾತಾವರಣದಲ್ಲಿ ಕಾರ್ಖಾನೆಗಳ ಶಬ್ದ, ವಾಹನಗಳ ಸಂಚಾರದಲ್ಲಿ ಉಂಟಾಗುವ ಶಬ್ದಗಳು, ಮೊದಲಾಗಿ ಒಟ್ಟಾರೆ ಸರಾಸರಿ ಶಬ್ದವನ್ನು ಡೆಸಿಬಲ್ ಮೂಲಕ ಅಳತೆ ಮಾಡಲಾಗುತ್ತದೆ. ೫೫ ಡೆಸಿಬಲ್ ಶಬ್ದ ಆರೋಗ್ಯಕರ ಎಂದು ಗುರುತಿಸಲಾಗುತ್ತದೆ.

ಬಾಂಗ್ಲಾದ ಢಾಕಾದಲ್ಲಿ ಸರಾಸರಿ ೧೧೯ ಡೆಸಿಬಲ್ ಶಬ್ದ ಗುರುತಿಸಲಾಗಿದ್ದು ವಿಶ್ವದ ಅತೀ ಹೆಚ್ಚು ಶಬ್ದ ಮಾಲಿನ್ಯ ಹೊಂದಿದ ನಗರವಾಗಿದೆ. ಮೊರಾದಾಬಾದ್‌ನಲ್ಲಿ ೧೧೪ ಡೆಸಿಬಲ್ ಶಬ್ದ ಮಾಲಿನ್ಯವಿದ್ದು ವಿಶ್ವದಲ್ಲಿ ಎರಡನೇಯದಾಗಿದೆ. ಪಾಕಿಸ್ತಾನದ ಇಸ್ಲಾಮಾಬಾದ್ ೧೦೫ ಡೆಸಿಬಲ್, ಬಾಂಗ್ಲಾದ ರಾಜ್‌ಶಾಹಿ ೧೦೩ ಡೆಸಿಬಲ್, ವಿಯೆಟ್ನಾಂನ ಹೋಚಿಮಿನ್ ಸಿಟಿ ೧೦೩ ಡೆಸಿಬಲ್ ನಂತರದ ಸ್ಥಾನದಲ್ಲಿವೆ.

Home add -Advt

ಉಳಿದಂತೆ ನೈಜೀರಿಯಾದ ಇಡಾಬನ್ ೧೦೧ ಡೆಸಿಬಲ್, ನೇಪಾಳದ ಕುಪೊಂಡೋಲ್ ೧೦೦ ಡೆಸಿಬಲ್, ಅಲ್ಜೀರಿಯಾದ ಅಲ್ಜೀರಿಸ್ ೧೦೦ ಡೆಸಿಬಲ್, ಥೈಲ್ಯಾಂಡ್‌ನ ಬ್ಯಾಂಕಾಕ್ ೯೯ ಡೆಸಿಬಲ್, ಅಮೇರಿಕದ ನ್ಯೂಯಾರ್ಕ್ ೯೫, ಸಿರಿಯಾದ ಡಮಾಸ್ಕಸ್ ೯೪, ಫಿಲಿಪ್ಪೀನ್ಸ್‌ನ ಮನೀಲಾ ೯೨, ಹಾಂಕ್‌ಕಾಂಗ್ ೮೯ ಡೆಸಿಬಲ್, ಭಾರತದ ಕೋಲ್ಕತ್ತಾ ಹಾಗೂ ಅಸನೋಲ್‌ನಲ್ಲಿ ೮೯ ಡೆಸಿಬಲ್ ಶಬ್ದ ಮಾಲಿನ್ಯವಿದೆ. ಇವು ಒಟ್ಟಾರೆ ವಿಶ್ವದ ಟಾಪ್ ೧೫ ಶಬ್ದ ಮಾಲಿನ್ಯ ಹೊಂದಿದ ನಗರಗಳಾಗಿವೆ.

ಬಿಹಾರ್ ಮುಖ್ಯಮಂತ್ರಿ ನಿತಿಶ್‌ಕುಮಾರ್ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ

Related Articles

Back to top button