
ಪ್ರಗತಿವಾಹಿನಿ ಸುದ್ದಿ: ಕಂಪನಿಯಲ್ಲಿ ಉದ್ಯೋಗ ಸಿಕ್ಕರೂ ಕೆಲಸ ಬಿಟ್ಟು ಯುಪಿಎಸ್ ಸಿ ಪರೀಕ್ಷೆ ಸಿದ್ಧತೆ ನಡೆಸಿದ್ದ ಯುವಕನೊಬ್ಬ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಕಾನ್ಪುರದ ರಾವತ್ ಪುರದಲ್ಲಿ ನಡೆದಿದೆ.
29 ವರ್ಷದ ಕುಲದೀಪ್ ಸಿಂಗ್ ಸೋಲಂಕಿ ಮೃತ ಯುವಕ. 25 ಲಕಷ ಸಂಬಳದ ಉದ್ಯೋಗ ಬಿಟ್ಟು ಕಳೆದ ಎರಡು ವರ್ಷಗಳಿಂದ ಯುಪಿಎಸ್ಸಿ ಪರೀಕ್ಷೆ ಸಿದ್ಧತೆ ನಡೆಸಿದ್ದ. ತುಳಸಿ ವಿಹಾರ್ ನ ಬಾಯ್ಸ್ ಹಾಸ್ಟೇಲ್ ನಲ್ಲಿದ್ದು ತಯಾರಿ ನಡೆಸುತ್ತಿದ್ದ. ಪೂರ್ವ ಹಾಗೂ ಮುಖ್ಯ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿದ್ದ. ಆದರೆ ಅಂತಿಮ ಪರೀಕ್ಷೆಯಲ್ಲಿ ಆಯ್ಕೆ ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಇದರಿಂದ ಮನನೊಂದ ಯುವಕ ವಿಷ ಸೇವಿಸಿದ್ದಾನೆ.
ತೀವ್ರ ಅಸ್ವಸ್ಥನಾಗಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ. 2017ರಲ್ಲಿ ಬಿಟೆಕ್ ಮುಗಿಸಿದ್ದ ಕುಲದೀಪ್, ಒಳ್ಳೆಯ ಕೆಲಸದಲ್ಲಿ ಇದ್ದ. ಆದರೆ ಯುಪಿಎಸ್ಸಿ ಪರೀಕ್ಷೆ ಬರೆದು ಆಯ್ಕೆಯಾಗಬೇಕೆಂಬ ಹಂಬಲದಿಂದಾಗಿ ಉದ್ಯೋಗ ತ್ಯಜಿಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ