ಮದುವೆಯಾದ ಕೆಲವೇ ಗಂಟೆಗಳಲ್ಲಿ ಚಿರನಿದ್ರೆಗೆ ಜಾರಿದ ಗಾಯಕ

ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಪ್ರಸಿದ್ಧ ಗಾಯಕ ಜೇಕ್ ಫ್ಲಿಂಟ್ ಮದುವೆಯಾದ ಕೆಲವೇ ಗಂಟೆಗಳಲ್ಲಿ ಇಹಲೋಕ ತ್ಯಜಿಸಿದ್ದಾರೆ.

ನ.26ರಂದು ಅವರು ಬ್ರೆಂಡಾ ವಿಲ್ಸನ್ ಅವರನ್ನು ಮದುವೆಯಾಗಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಫ್ಲಿಂಟ್‌ನ ಪ್ರಚಾರಕ ಕ್ಲಿಫ್ ಡೋಯಲ್ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ. ಅವರ ಸಾವಿಗೆ ಇನ್ನೂ ಕಾರಣ ತಿಳಿದುಬಂದಿಲ್ಲ.

Home add -Advt

ಫ್ಲಿಂಟ್ ಅವರ ಸಾವಿಗೆ ತಾವೇನೂ ಹೇಳುವ ಸ್ಥಿತಿಯಲ್ಲಿಲ್ಲ. ಅವರನ್ನು ಕಳೆದುಕೊಂಡು ತಮ್ಮ ಹೃದಯವೇ ಕಳೆದುಕೊಂಡಂತಾಗಿದೆ ಎಂದು ಅವರ ವ್ಯವಸ್ಥಾಪಕಿಯೂ ಆಗಿದ್ದ ಬ್ರೆಂಡಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ  ಬರೆದಿದ್ದಾರೆ.

ಫ್ಲಿಂಟ್ ಅವರುಒಕ್ಲಹೋಮದಲ್ಲಿ  ಬೆಳೆದಿದ್ದರು. ಬಾಲ್ಯದಿಂದಲೂ ಸಂಗೀತದಲ್ಲಿ ವಿಪರೀತ ಆಸಕ್ತಿ ಹೊಂದಿದ್ದರು.  ‘ವಾಟ್ಸ್ ಯುವರ್ ನೇಮ್?,’ ‘ಹರ್ರಿ ಅಪ್ ಆ್ಯಂಡ್ ವೇಟ್, ‘ಮತ್ತು “ಕೌಟೌನ್’  ಅವರ ಜನಪ್ರಿಯ ಹಾಡುಗಳು. ಅವರ ಮೊದಲ ಸ್ಟುಡಿಯೋ ಆಲ್ಬಂ 2016 ರಲ್ಲಿ ಬಿಡುಗಡೆಯಾಗಿತ್ತು.

ಫ್ಲಿಂಟ್ ಅವರ ಸಾವಿಗೆ ಜಾಗತಿಕ ಮಟ್ಟದಲ್ಲಿ ಹಲವು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ್ ರಾವ್ ನಿಧನ: ಮುಖ್ಯಮಂತ್ರಿ ಸಂತಾಪ

Related Articles

Back to top button