Latest

*ಇನ್ಮುಂದೆ ಬಟ್ಟೆ ಹೊಲಿಯಲು ಪುರುಷ ಟೈಲರ್ ಗಳು ಮಹಿಳೆಯರ ಮೈ ಅಳತೆ ತೆಗೆದುಕೊಳ್ಳುವಂತಿಲ್ಲ*

ಪ್ರಗತಿವಾಹಿನಿ ಸುದ್ದಿ: ಇನ್ಮುಂದೆ ಮಹಿಳೆಯರ ಉಡುಪುಗಳನ್ನು ಪುರುಷರು ಹೊಲಿಯುವಂತಿಇಲ್ಲ. ಪ್ಪಾರ್ಲರ್ ಗಳಲ್ಲಿ ಮಹಿಳೆಯರ ಕೂದಲುಗಳನ್ನು ಪುರುಷರು ಕತ್ತರಿಸುವಂತಿಲ್ಲ. ಇಂತದ್ದೊಂದು ವಿನೂತನ ಆದೇಶವನ್ನು ಮಹಿಳಾ ಆಯೋಗ ಹೊರಡಿಸಿದೆ.

ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮಹಿಳಾ ಆಯೋಗ ರಾಜ್ಯ ಸರ್ಕಾರದ ಮುಂದೆ ಇಂತದ್ದೊಂದು ಪ್ರಸ್ತಾಪ ಇಟ್ಟಿದೆ.

ಮಹಿಳೆಯರ ಬಟ್ಟೆಗಳನ್ನು ಉರುಷರು ಹೊಲಿಯುವಂತಿಲ್ಲ, ಬಾಡಿ ಮೇಜರ್ ಮೆಂಟ್ ತೆಗೆದುಕೊಳ್ಳುವಂತಿಲ್ಲ, ಸಲೂನ್ ಗಳಲ್ಲಿ ಮಹಿಳೆಯರ ಹೇರ್ ಕಟ್ ಪುರುಷರು ಮಾಡುವಂತಿಲ್ಲ. ಜಿಮ್, ಯೋಗಾ ಕೇಂದ್ರಗಳಲ್ಲಿ ಮಹಿಳೆಯರಿಗೆ ಪುರುಷರು ತರಬೇತಿ ನೀಡುವಂತಿಲ್ಲ. ಹೀಗೆ ಹಲವಾರು ನಿರ್ಬಂಧಗಳನ್ನು ಮಹಿಳಾ ಆಯೋಗ ಪ್ರಸ್ತಾಪಿಸಿದೆ.

Home add -Advt

ಶಾಲಾ ವಾಹನಗಳಲ್ಲಿ ಮಹಿಇಳಾ ಸಿಬ್ಬಂದ್ಗಳ ನಿಯೋಜನೆ, ಮಹಿಳಾ ಉಡುಪು ಮಳಿಗೆಯಲ್ಲಿ ಕೇವಲ ಮಹಿಲಾ ಸಿಬ್ಬಂದಿ ನೇಮಕ ಸೇರಿದಂತೆ ಹಲವು ಅಂಶಗಳನ್ನು ತಿಳಿಸಲಾಗಿದೆ. ಸಾರ್ವಜನಿಕ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆಗೆ ಈ ಕ್ರಮ ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟಿದೆ.

ಅ.28ರಂದು ಲಖನೌನಲ್ಲಿ ನಡೆದ ಸಭೆಯಲ್ಲಿ ಬ್ಯಾಡ್ ಟಚ್ ನಿಯಂತ್ರಣಕ್ಕಾಗಿ ಮಹಿಳಾ ದರ್ಜಿಗಳು ಮಾತ್ರವೇ ಇನ್ಮುಂದೆ ಮಹಿಳೆಯರ ಬಟ್ಟೆ ಅಳತೆ ಮಾಡಬೇಕು. ಈ ಪ್ರಕ್ರಿಯೆ ವೇಳೆ ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಡ್ಡಾಯ ಎಂದು ಚರ್ಚಿಸಲಾಗಿದೆ.

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಈಗಾಗಲೇ ಅಲ್ಲಿನ ಜಿಲ್ಲಾಡಳಿತ ಬಹುತೇಕ ಈ ಕ್ರಮಗಳನ್ನು ಜಾರಿಗೆ ತಂದಿದೆ. ಜಿಮ್, ಯೋಗಾ, ನೃತ್ಯ, ನಾಟಕ, ಎಲ್ಲಾ ಕೇಂದ್ರಗಳಲ್ಲಿ ಮಹಿಳೆಯರನ್ನೇ ನೇಮಕ ಮಡಲಾಗಿದೆ. ಪ್ರತಿ ಕೇಂದ್ರಗಳಲ್ಲಿಯೂ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂದು ಜಿಲ್ಲಾಧಿಕರಿ ಹಮೀದ್ ಹುಸೇನ್ ಆದೇಶ ಹೊರಡಿಸಿದ್ದಾರೆ.

Related Articles

Back to top button