*ಬೋಟ್‌ನ ಶೇಖರಣಾ ಘಟಕವನ್ನು ಸ್ವಚ್ಛಗೊಳಿಸುವಾಗ ದುರಂತ*: *ವಿಷಾನೀಲ ಸೋರಿಕೆಯಾಗಿ ಇಬ್ಬರು ಮೀನುಗಾರರು ಸಾವು*

ಪ್ರಗತಿವಾಹಿನಿ ಸುದ್ದಿ: ಗೋಕರ್ಣದಲ್ಲಿ ಮೀನಿನ ವಿಷಾನಿಲಕ್ಕೆ ಉಸಿರುಗಟ್ಟಿ ಮೂವರು ಮೀನುಗಾರರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ.
ಬೋಟ್‌ನ ಶೇಖರಣಾ ಘಟಕವನ್ನು ಸ್ವಚ್ಛಗೊಳಿಸುವಾಗ ಮೀನಿನ ವಿಷಾನಿಲ ಸೋರಿಕೆಯಿಂದ ಉಸಿರುಗಟ್ಟಿ ಇಬ್ಬರು ಮೀನುಗಾಅರರು ಸಾಅವನ್ನಪ್ಪಿದ್ದಾರೆ. ಮತ್ತೊಬ್ಬ ಮೀನುಗಾರ ಗಂಭೀರಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದಗಾ ಮೀನುಗಾರಿಕಾ ಬಂದರಿನಲ್ಲಿ ಈ ಘಟನೆ ಸಂಭವಿಸಿದೆ. ಬೇಲೆಕೇರಿ ಮೂಲದ ‘ಮೂಕಾಂಬಿಕಾ’ ಹೆಸರಿನ ಬೋಟ್‌ನಲ್ಲಿ ಈ ದುರ್ಘಟನೆ ನಡೆದಿದೆ.
ಚಮನ್ ಜಾತಿಯ ಮೀನುಗಳನ್ನು ಶಿಕಾರಿ ಮಾಡಿ ಬಂದರಿಗೆ ಬಂದಿದ್ದ ಮೀನುಗಾರರು, ಬೋಟ್‌ನ ಶೇಖರಣಾ ಘಟಕದಿಂದ (ಕೋಲ್ಡ್ ಸ್ಟೋರೇಜ್) ಮೀನುಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟಕದಿಂದ ಹೊರಹೊಮ್ಮಿದ ತೀವ್ರ ವಿಷಾನಿಲ ಹಾಗೂ ದುರ್ವಾಸನೆಗೆ ಸಿಲುಕಿ ಒರಿಸ್ಸಾ ಮೂಲದ ಪುರಂದರ ಬಿಸರಾ (21) ಮತ್ತು ಆಕಾಶ ನಾಯ್ಕ (24) ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
ಇದೇ ವೇಳೆ ಗಂಭೀರವಾಗಿ ಅಸ್ವಸ್ಥಗೊಂಡಿರುವ ಮತ್ತೊಬ್ಬ ಮೀನುಗಾರ ಲಾಲಿಂದರ ಧ್ರುವ (41) ಅವರನ್ನು ತಕ್ಷಣವೇ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಇಬ್ಬರು ಮೀನುಗಾರರನ್ನುರಕ್ಷಿಸಲಾಗಿದೆ.




