Latest

ಉತ್ತರ ಕನ್ನಡ ಕೊರೊನಾ ಮುಕ್ತವಾಗಿಸಲು ಜಿಲ್ಲಾಧಿಕಾರಿ ಕರೆ

ಪ್ರಗತಿವಾಹಿನಿ ಸುದ್ದಿ; ಕಾರವಾರ: ಕಳೆದ ಹಲವು ತಿಂಗಳುಗಳಿಂದ ಇಡೀ ವಿಶ್ವ ಕೊವಿಡ್-19 ಮಹಾಮಾರಿಯ ವಿರುದ್ದ ಹೊರಾಡುತ್ತಿದೆ. ಉತ್ತರ ಕನ್ನಡಜಿಲ್ಲೆ ಕೂಡಾ ಈ ಮಹಾಮಾರಿಯ ಎರಡನೆಯ ಅಲೆಯ ವಿರುದ್ದ ನಿರಂತರ ಹೋರಾಟ ನಡೆಸುತ್ತಿದ್ದು, ಜಿಲ್ಲೆಯ ಪ್ರಜ್ಞಾವಂತ ನಾಗರೀಕರು ಲಾಕ್ ಡೌನ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿರುವದರಿಂದ, ಜಿಲ್ಲೆಯಲ್ಲಿ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ತಿಳಿಸಿದ್ದಾರೆ

ಜಿಲ್ಲಾಡಳಿತ ರೋಗ ಲಕ್ಷಣ ಹೊಂದಿರುವವರ ಹಾಗೂ ಸೋಂಕಿತರ ಪ್ರಥಮ ಸಂಪರ್ಕಿತರ ನಿರಂತರವಾಗಿ ಸೋಂಕು ಪತ್ತೆಪರೀಕ್ಷೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸುತ್ತಿದ್ದು, ಹೆಚ್ಚಿನ ಪ್ರಮಾಣದ ಸೋಂಕಿತರು ಪತ್ತೆಯಾಗುತ್ತಿದ್ದರಿಂದ ಅವರನ್ನು ಸಕಾಲದಲ್ಲಿ ಹೋಮ್ ಕ್ವಾರೆಂಟೈನ್ , ಕೊವಿಡ್ ಕೇರ್ ಸೆಂಟರ್ ಅಥವಾ ಕೊವಿಡ್ ಆಸ್ಪತ್ರಗೆ ದಾಖಲಿಸು ತ್ತಿರುವದರಿಂದ ಸೋಂಕು ಇತರರಿಗೆ ಹರಡುವದನ್ನು ನಿಯಂತ್ರಿಸಲಾಗುತ್ತಿದೆ.

ಸೋಂಕು ಪತ್ತೆ ಪರೀಕ್ಷೆಯ ಫಲಿಂತಾಶಗಳನ್ನು ಕೂಡಲೇ ಪಡೆಯುತ್ತಿರುವದರಿಂದ ಸೋಂಕಿತರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತಿರುವದರಿಂದ ಸಾವಿನ ಪ್ರಮಾಣವು ಕೂಡಾ ತೀರ ಕಡಿಮೆಯಾಗಿರುತ್ತದೆ. ಇದುವರೆಗೂ ಜಿಲ್ಲೆಯಲ್ಲಿ ಒಟ್ಟೂ 5,33,353 ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದ್ದು, 44796 ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿರುತ್ತದೆ. ಆರಂಭದಲ್ಲಿ ಶೇ. 40 ರಿಂದ 42 ರಷ್ಟಿದ್ದ ಪಾಸಿಟಿವಿಟಿ ದರವು ಕಳೆದೆರಡು ದಿನಗಳಿಂದ ಶೇ.31 ಕ್ಕೆ ಇಳಿದಿರುತ್ತದೆ. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನಗಳಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಟ್ಟು ನಿಟ್ಟಿನ ಲಾಕ್ ಡೌನ್ ನಿಯಮಗಳನ್ನು ಜ್ಯಾರಿಗೆ ತರಲಾಗಿತ್ತು. ಈ ಲಾಕ್ ಡೌನ್ ನಿಯಮಗಳನ್ನು ಜಿಲ್ಲೆಯ ಜನರು ಕೂಡಾ ಪಾಲಿಸಿದ್ದರಿಂದ ಸೋಂಕು ಹರಡುವಿಕೆ ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ.

ಈ ಯಶಸ್ಸಿಗೆ ಕಾರಣೀಕರ್ತರಾದ ಜಿಲ್ಲೆಯ ಜನರಿಗೆ, ಜನಪ್ರತಿನಿಧಿಗಳಿಗೆ, ಕರೋನಾ ವಾರಿಯರ್ಸಗಳಾಗಿ ಕಾರ್ಯನಿರ್ವಹಿಸಿದ ವೈದ್ಯರು, ದಾದಿಯರು ಹಾಗೂ ಆರೋಗ್ಯಇಲಾಖೆಯ ಅಧಿಕಾರಿ , ಸಿಬ್ಬಂದಿಗಳು ಮತ್ತು ಪೊಲೀಸ್ಇಲಾಖೆ, ಕಂದಾಯಇಲಾಖೆ, ಪಂಚಾಯತರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ, ನಗರ ಸ್ಥಳಿಯ ಸಂಸ್ಥೆಗಳ ಅಧಿಕಾರಿ , ಸಿಬ್ಬಂದಿಗಳಿಗೆ ಧನ್ಯವಾದಗಳನ್ನುತಿಳಿಸಿದ ಜಿಲ್ಲಾಧಿಕಾರಿಗಳು. ಮಾಧ್ಯಮಗಳು ಕೂಡಾ ಹಗಳಿರುಳೆನ್ನದೆ ಕೊವಿಡ್ ಗೆ ಸಂಬಂದಿಸಿದಂತೆ ಮಾಹಿತಿಯನ್ನುಸಂಗ್ರಹಿಸಿ ಜಿಲ್ಲೆಯ ಜನರಿಗೆತಲುಪಿಸಿದ್ದಲ್ಲದೇ , ಜನ ಲಾಕ್ ಡೌನ್ ನಿಯಮಗಳನ್ನು ಮೀರಿದಾಗ ಜನರನ್ನು ಎಚ್ಚರಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದು, ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು ಕೊರೊನಾ ವಾರಿಯರ್ಸಗಳಂತೆ ಜಿಲ್ಲಾಡಳಿತದೊಂದಿಗೆ ಕೈಜೊಡಿಸಿ ಕೆಲಸ ನಿರ್ವಹಿಸಿದ್ದು ಅವರಗೂ ಕೂಡಾ ಧನ್ಯವಾದಗಳನ್ನುತಿಳಿಸಿದರು

Home add -Advt

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ನಾವು ಈ ಹಂತದಲ್ಲಿ ಮೈಮರೆತಲ್ಲಿ ಕೊವಿಡ್ ಸರಪಳಿಯನ್ನು ತುಂಡರಿಸಲು ಸರಕಾರ ಕೈಗೊಂಡ ಈವರೆಗಿನ ಎಲ್ಲ ಪ್ರಯತ್ನಗಳು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಕೊವಿಡ್ ಇದು ಬಹು ಬೇಗ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವದರಿಂದ ಇದರ ನಿಯಂತ್ರಣ ಸಾರ್ವಜನಿಕರ ಸಹಕಾರವಿಲ್ಲದೇ ಸಾಧ್ಯವೇ ಇಲ್ಲ. ಕಾರಣ ಜಿಲ್ಲೆಯ ಪ್ರಜ್ಞಾವಂತ ನಾಗರೀಕರು ಈ ಹಿಂದಿನಂತೆಯೇ ಸಂಯಮದಿಂದ ಲಾಕ್ ಡೌನ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಸಾಮಾಜಿಕ ಅಂತರ , ವೈಯುಕ್ತಿಕ ಸ್ವಚ್ಚತೆ ಹಾಗೂ ಉತ್ತಮ ಆರೋಗ್ಯವನ್ನು ಕಾಯ್ದುಕೊಂಡು, ಉತ್ತರ ಕನ್ನಡ ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಬೇಕು ಎಂದು ಕರೆ ನೀಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ 3533 ಹುದ್ದೆಗಳಿಗೆ ನೇಮಕಾತಿ: ಇಲ್ಲಿದೆ ಅರ್ಜಿ ಸಲ್ಲಿಸಲು ಮಾಹಿತಿ

Related Articles

Back to top button